ವಾಕ್ ವಿಥಿನ್ 2019 ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ: 40 ಹಳ್ಳಿಗಳಲ್ಲಿ 8ದಿನಗಳ ಕಾಲ ನಡಿಗೆ…

ಮೈಸೂರು,ಡಿ,22,2019(www.justkannada.in): ಮೈಸೂರಿನ  ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ಆಯೋಜಿಸಲಾಗಿರುವ ವಾಕ್ ವಿಥಿನ್ 2019ಎಂಬ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮೈಸೂರಿನ ಹೆಬ್ಬಾಳ್ ನಲ್ಲಿರುವ ವಿವೇಕಾನಂದ ಯೂತ್ ಮೂವ್ ಮೆಂಟ್  ಸಂಸ್ಥೆ ಆವರಣದಲ್ಲಿ ಕಾರ್ಯಕ್ರಮಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಚಾಲನೆ ನೀಡಿದರು.

ಗ್ರಾಮೀಣ ಜನರ ಜೊತೆ ಸಂವಾದ ಮತ್ತು ಜಾಗೃತಿ ಮೂಡಿಸುವ  ವಾಕ್ ವಿಥಿನ್ 2019  ನಡೆಯಲಿದೆ. 40 ಹಳ್ಳಿಗಳಲ್ಲಿ 8ದಿನಗಳ ಕಾಲ ವಾಕ್ ವಿಥಿನ್ ನಡಿಗೆ ಸುಮಾರು 120ಕಿ.ಲೋ ನಡಿಗೆ ಜಾಥಾ ನಡೆಯಲಿದ್ದು, ಯೂತ್ ಮೂವ್ ಮೆಂಟ್ ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯ ಸಂವಾದ ನಡೆಸಲಿದ್ದಾರೆ.

Key words: Walk Within 2019 -Awareness Program-mysore- Swami Vivekananda Youth Movement