POK ವಾಪಸ್ ಪಡೆಯಲು ಒಳ್ಳೆಯ ಸಮಯವಿತ್ತು: ಆದ್ರೆ ಕದನ ವಿರಾಮ ಘೋಷಿಸಿದ್ದು ಯಾಕೆ? ವಿ.ಎಸ್ ಉಗ್ರಪ್ಪ

ಬಳ್ಳಾರಿ,ಮೇ,15,2025 (www.justkannada.in):  ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಿಒಕೆ ವಾಪಸ್ ಪಡೆಯಲು ಒಳ್ಳೆಯ ಸಮಯವಿತ್ತು. ಆದರೆ ಈ ವೇಳೆ ಕದನ ವಿರಾಮ ಘೋಷಿಸಿದ್ದು ಯಾಕೆ?  ಎಂದು ಕೇಂದ್ರ ಸರ್ಕಾರದ ವಿರುದ್ದ ಮಾಜಿ ಸಂಸದ ವಿಎಸ್ ಉಗ್ರಪ್ಪ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ವಿಎಸ್ ಉಗ್ರಪ್ಪ,  ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲಿನ ಉಗ್ರರ ದಾಳಿಯಲ್ಲಿ 28 ಜನರು ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಉಗ್ರರ ಮೇಲೆ ಭಾರತೀಯ ಸೇನೆ ನಡೆಸಿದ್ದ ಅಪರೇಷನ್ ಸಿಂಧೂರ ದಾಳಿಯಿಂದ ಪಾಕ್ ಆಕ್ರಮಿತ ಪಿಓಕೆ ವಾಪಸ್ ಪಡೆಯಲು ಮತ್ತು ಉಗ್ರರ ನೆಲೆಗಳೊಂದಿಗೆ ಅವರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ನಾಶ ಪಡಿಸಲು ಒಳ್ಳೆಯ ಅವಕಾಶ ಇತ್ತು. ಆದರೆ, ಪ್ರಧಾನಿ ಮೋದಿಯವರು ಏಕೆ ಕದನ ವಿರಾಮ ಘೋಷಿಸಿದರೋ ಗೊತ್ತಿಲ್ಲ. ಕದನ ವಿರಾಮ ಘೋಷಣೆ ಮಾಡಿದ್ದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಇದಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದ್ದು ಯಾಕೆ..? ಎಂದು ಪ್ರಶ್ನಿಸಿದರು.

ಕದನ ವಿರಾಮ ಘೋಷಿಸಲು ಯಾರೊಂದಿಗೆ ಚರ್ಚಿಸಿದ್ದರು. ಸೇನಾ ಮುಖ್ಯಸ್ಥರೊಂದಿಗೆ ಚರ್ಚಿಸಿದ್ಧಾರಾ? ಸರ್ವಪಕ್ಷಗಳ ಸಭೆ ಕರೆದಾಗ ಪ್ರಧಾನಿ ನರೇಂದ್ರ ಮೋದಿಯವರೇ ಗೈರು ಹಾಜರಾಗುತ್ತಾರೆ. ಯಾರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ನಾಯಕತ್ವವನ್ನು ಪ್ರದರ್ಶಿಸಬೇಕು ಎಂದು ವಿ.ಎಸ್ ಉಗ್ರಪ್ಪ ಕುಟುಕಿದರು.

Key words: POK,  declare, ceasefire,  VS Ugrappa