Saturday, September 19, 2026

BDA Apartments

ವೋಟರ್ ಐಡಿ ಅಕ್ರಮ ಪ್ರಕರಣ: ಬಿಬಿಎಂಪಿ ಆರ್ ಓಗಳಿಗೆ ಪೊಲೀಸರಿಂದ ನೋಟಿಸ್ BDA JK_Adv BDA...
Home Front Page ವೋಟರ್ ಐಡಿ ಅಕ್ರಮ ಪ್ರಕರಣ: ಬಿಬಿಎಂಪಿ ಆರ್ ಓಗಳಿಗೆ ಪೊಲೀಸರಿಂದ ನೋಟಿಸ್.

ವೋಟರ್ ಐಡಿ ಅಕ್ರಮ ಪ್ರಕರಣ: ಬಿಬಿಎಂಪಿ ಆರ್ ಓಗಳಿಗೆ ಪೊಲೀಸರಿಂದ ನೋಟಿಸ್.

ಬೆಂಗಳೂರು,ನವೆಂಬರ್,22,2022(www.justkannada.in): ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ 15 ಆರ್ ಓಗಳಿಗೆ ಹಲಸೂರು ಗೇಟ್ ಠಾಣಾ ಪೊಲೀಸರು ನೋಟಿಸ್ ನೀಡಿದ್ದಾರೆ.

ಪ್ರಕರಣ ಸಂಬಂಧ ವೈಯಕ್ತಿಕ ಮಾಹಿತಿ ಸಂಗ್ರಹಿಸಿದ ವಿಚಾರವನ್ನ ಬಿಬಿಎಂಪಿ ಆರ್ ಓಗಳು ತಿಳಿದಿದ್ದರು. ಈ ಸಂಬಂಧ ಹಲಸೂರು ಗೇಟ್ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಇದೀಗ 15 ಆರ್.ಓಗಳಿಗೆ ಪೊಲೀಸರು ನೋಟಿಸ್ ನೀಡಿದ್ದು,  ಹಂತ, ಹಂತವಾಗಿ ಆರ್ ಓಗಳ ವಿಚಾರಣೆ ನಡೆಸಲಿದ್ದಾರೆ.ವೋಟರ್ ಐಡಿ ಅಕ್ರಮ ಪ್ರಕರಣ bbmp

ಪ್ರಕರಣ ಸಂಬಂದ ನಿನ್ನೆಯಷ್ಟೆ ಬಿಬಿಎಂಪಿ ಮೂವರು ಆರ್ ಒಗಳನ್ನು ಅಮಾನತು ಮಾಡಿದೆ.

Key words: Voter ID- Illegal Case-Notice – police – BBMP -ROs.