ವಿಶ್ವನಾಥ್ ಒಕ್ಕಲಿಗರ ಋಣದಲ್ಲಿದ್ದಾರೆ ಎಂದ ಕ್ಷೇಮಾಭಿವೃದ್ಧಿ ಸಂಘ: ಯೋಗೀಶ್ವರ ಪರ ಬ್ಯಾಟಿಂಗ್

ಮೈಸೂರು, ಜನವರಿ 17, 2021 (www.justkannada.in): ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ವಿಶ್ವನಾಥ್ ಆರೋಪ ವಿಚಾರ‌ಕ್ಕೆ ಸಂಬಂಧಿಸಿದಂತೆ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಯೋಗೀಶ್ವರ್ ಪರ ಬ್ಯಾಟಿಂಗ್ ಮಾಡಿದೆ.

ಯೋಗೀಶ್ವರ್ ವಿರುದ್ದ ವಿಶ್ವನಾಥ್ ಹೇಳಿಕೆ ಸರಿಯಲ್ಲ. ಹುಣಸೂರು ಬೈ ಎಲೆಕ್ಷನ್ ನಲ್ಲಿ ಯೋಗೀಶ್ವರ್ ಅತೀ ಹೆಚ್ಚು ಶ್ರಮ ಹಾಕಿದ್ದಾರೆ. ಐದು ಬಾರಿ ಶಾಸಕರಾಗಿ ಜನಾನುರಾಗಿ ಆಗಿದ್ದಾರೆ. ಈಗ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರೋದು ಅವರ ಸಾಮರ್ಥ್ಯ ದ ಆಧಾರದಲ್ಲಿ. ಪಕ್ಷಕ್ಕೆ‌ ಬೆಳವಣಿಗೆಗೆ ಕೆಲಸ ಮಾಡಿರೋದನ್ನು ಗಮನಿಸಿಯೇ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಬೈ ಎಲೆಕ್ಷನ್ ನಲ್ಲಿ ಹಗಲಿರುಳು ಶ್ರಮಿಸಿದವರ ವಿರುದ್ದ ಅವಹೇಳನಕಾರಿ ಹೇಳಿಕೆ ಶೋಭೆ ತರಲ್ಲ ಎಂದು ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.

ವಿಶ್ವನಾಥ್ ಅವರಿಗೂ ಮಂತ್ರಿ ಸ್ಥಾನ ಸಿಗಬೇಕೆಂದು ಬಯಸಿದ್ಧೇವೆ. ಮುಂದೆ ಅವರಿಗೂ ಅವಕಾಶ ಸಿಗುವ ನಿರೀಕ್ಷೆ ಇದೆ. ಆದರೆ ಯೋಗೀಶ್ವರ್ ಕುರಿತು ವಿಶ್ವನಾಥ್ ಅವರು ತಮ್ಮ‌ ನಿಲುವು ಬದಲಾಯಿಸಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಜಿ.ಪಂ.‌ ಸದಸ್ಯ ರಾಮಕೃಷ್ಣೇಗೌಡ ಹೇಳಿದ್ದಾರೆ.

ವಿಶ್ವನಾಥ್ ಒಕ್ಕಲಿಗರ ಋಣದಲ್ಲಿದ್ದಾರೆ. ಒಕ್ಕಲಿಗರು ಯಾವತ್ತು ವಿಶ್ವನಾಥ್ ಅವರನ್ನು ಕೈಬಿಟ್ಟಿಲ್ಲ. ಪ್ರತೀ ಚುನಾವಣೆಯಲ್ಲೂ ಅವರು ಗೆಲ್ಲಲು ಸಹಕಾರ ನೀಡುತ್ತಾ ಬಂದಿದ್ದಾರೆ. ಕೆ.ಆರ್. ನಗರದಲ್ಲಿ ಗೆದ್ದು ಬಂದು ಮಂತ್ರಿಯಾಗಲು ಒಕ್ಕಲಿಗರು ಕಾರಣರು. ಇದನ್ನೆಲ್ಲಾ ವಿಶ್ವನಾಥ್ ಮರೆತು ಒಕ್ಕಲಿಗ ಮುಖಂಡರ ವಿರುದ್ದ ಹೇಳಿಕೆ ಕೊಡೋದು ಎಷ್ಟು ಸರಿ? ತಮಗೆ ಸಹಾಯ ಮಾಡಿದ ಒಕ್ಕಲಿಗ ಮುಖಂಡರ ವಿರುದ್ದವೇ ಹೇಳಿಕೆ‌ ಕೊಡೋದು ವಿಶ್ವನಾಥ್ ಜಾಯಮಾನ ಆಗಿದೆ. ಈ ರೀತಿ ಹೇಳಿಕೆ ಮುಂದುವರಿದರೆ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಸುಮ್ಮನಿರಲ್ಲ ಎಂದು ಒಕ್ಕಲಿಗ ಮುಖಂಡ ನಾಗರಾಜ್ ಎಚ್ಚರಿಸಿದ್ದಾರೆ.