“ವಿವಿಯ ಆವರಣದಲ್ಲಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರಕ್ಕೆ ಕ್ರಮ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್…!

ಮೈಸೂರು,ಜನವರಿ,06,2021(www.justkannada.in) : ಮೈಸೂರು ವಿವಿ ಉಪನ್ಯಾಸಕರು ಸೇರಿದಂತೆ ಇತರೆ ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ 6 ತಿಂಗಳಿಗೊಮ್ಮೆ ವಿವಿಯ ಆವರಣದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.Vivi premises- 6 Once a month-Health-Checkups-Action-camp-Chancellor-Prof G.Hemant Kumar ...!

ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಇಂಡಿಯಾ ಸಹಯೋಗದಲ್ಲಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಪ್ರಾಣಿಶಾಸ್ತ್ರ ವಿಭಾಗ, ರೇಡಿಯೋ ಮಾನಸ,ಸಮೂಹ ರೇಡಿಯೋ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿವಿಯ ಪ್ರಾಣಿಶಾಸ್ತ್ರ ವಿಭಾಗದ ಆವರಣದಲ್ಲಿ ಆಯೋಜಿಸಿದ್ದ “ವಿವಿಯ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ”ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ 2020ನೇ ಇಸವಿಯು ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ತಿಳಿಸಿಕೊಟ್ಟಿದೆ. ವಿವಿಯ ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯಿಂದ ಈ ಶಿಬಿರವು ಸಹಕಾರಿಯಾಗಿದೆ. ಇದೇ ರೀತಿಯಲ್ಲಿ ವಿವಿ ಆವರಣದಲ್ಲಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು.Vivi premises- 6 Once a month-Health-Checkups-Action-camp-Chancellor-Prof G.Hemant Kumar ...!

ತಪಾಸಣೆಗೆ ಒಳಗಾಗದೇ, ಅನೇಕರಿಗೆ ಕಾಯಿಲೆಯಿರುವುದೇ ತಿಳಿಯದಂತ್ತಾಗಿದೆ. ಹೀಗಾಗಿ, ಹೃದಯಾಘಾತದಿಂದ ಅನೇಕರು ಮೃತಪಟ್ಟಿದ್ದಾರೆ. ಹಿಂದಿಗಿಂತ ಇಂದು ತಂತ್ರಜ್ಞಾನವು ಹೆಚ್ಚು ಅಭಿವೃದ್ಧಿಯಾಗಿದ್ದು, ತಪಾಸಣೆಗೆ ಒಳಗಾಗುವ ಮೂಲಕ ಶೀಘ್ರವೇ ಕಾಯಿಲೆಯನ್ನು ಪತ್ತೆಹಚ್ಚಬಹುದು. ಇಎಸ್ಐ, ಇನ್ಸೂರೆನ್ಸ್ ಗಳ ಮೂಲಕ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಲು ಸಹಕಾರಿ ಎಂದು ತಿಳಿಸಿದರು.

ಕುಲಸಚಿವ ಆರ್.ಶಿವಪ್ಪ ಮಾತನಾಡಿ, ಆರೋಗ್ಯ ಎನ್ನುವುದು ನಮ್ಮ ಜವಾಬ್ದಾರಿಯಾಗಿದೆ. ಸರಕಾರ, ಪೋಷಕರು ಅಥವಾ ಬೇರೆಯಾರನ್ನೂ ಅನಾರೋಗ್ಯಕ್ಕೆ ದೂರಲು ಸಾಧ್ಯವಿಲ್ಲ. ಆರೋಗ್ಯವೇ ಭಾಗ್ಯ ಎಂಬುದನ್ನು ಅರಿತು ಅದಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಸಲಹೆ ನೀಡಿದರು.

ಮಾನಸಿಕ, ದೈಹಿಕವಾಗಿ ಏನೇ ಸಮಸ್ಯೆಗಳು ಎದುರಾದರೂ ತಕ್ಷಣ ನಮಗೆ ಅರಿವಾಗುತ್ತದೆ. ಈ ಸಂದರ್ಭ ತಪಾಸಣೆಗೆ ಒಳಗಾಗಿ,ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ನಮ್ಮ ಕರ್ತವ್ಯ. ತಪಾಸಣಾ ಶಿಬಿರವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ತಿಳಿಸಿದರು.

ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಎನ್.ಹೆಗಡೆ ಮಾತನಾಡಿ, ದೈಹಿಕ ಮಾತ್ರವಲ್ಲ ಮಾನಸಿಕ ಕಾಯಿಲೆಗಳು ಇಂದು ಹೆಚ್ಚು ಕಾಡುತ್ತಿವೆ. ಬಹುತೇಕರು ಲೈಂಗಿಕ ಸಮಸ್ಯೆಗಳ ಕುರಿತು ಚಿಕಿತ್ಸೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಈ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.

ಕಾರ್ಯಕ್ರಮದ ಬಳಿಕ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ ಸೇರಿದಂತೆ ನೂರಾರು ಮಂದಿ ಬಿಪಿ,ಶುಗರ್ ಸೇರಿದಂತೆ ಇತರೆ ತಪಾಸಣೆಗೆ ಒಳಗಾದರು.
ಬೆಳಗ್ಗೆ 10 ರಿಂದ ಮಧ್ಯಾಹ್ನದವರೆಗೆ ನಡೆದ ಶಿಬಿರದಲ್ಲಿ ಜಠರ ಶಸ್ತ್ರಚಿಕಿತ್ಸಾ ತಜ್ಞ ಡಾ.ಪಿ.ಎಸ್.ಅರವಿಂದ್, ನರ ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಹರ್ಷ ಹುಲಿಯಪ್ಪ, ಹೃದ್ರೋಗ ತಜ್ಞ ಡಾ.ಶಿವಕುಮಾರ್ ವಿವಿಯ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ನಡೆಸಿ, ಸೂಕ್ತ ಸಲಹೆಗಳನ್ನು ನೀಡಿದರು.

ಈ ಸಂದರ್ಭ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಡಾ.ಎಂ.ಎಸ್.ಸಪ್ನಾ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಮಾಲಿನಿ, ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಎಚ್ ಆರ್ ಸೋಮಣ್ಣ ಇತರರು ಉಪಸ್ಥಿತರಿದ್ದರು.

ENGLISH SUMMARY….

Health check-up once in 6 months in University premises
Mysuru, Jan.06, 2021 (www.justkannada.in): Prof. G. Hemanth Kumar, Vice-Chancellor, University of Mysore today informed that measures are being undertaken to organise health check-up cam for the benefit of professors and other staff members, one in every six months, in the University premises.Vivi premises- 6 Once a month-Health-Checkups-Action-camp-Chancellor-Prof G.Hemant Kumar ...!
“Regular health check-ups are becoming mandatory especially after the COVID pandemic. Therefore the regular health check-up programme will help the University staff members,” he said.
Keywords: Health check-up camp once in 6 months/ University of Mysore

key words : Vivi premises- 6 Once a month-Health-Checkups-Action-camp-
Chancellor-Prof G.Hemant Kumar …!