ಸಿವಿ ರಾಮನ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ರೋಗಿಗಳ ಜತೆ ಸಂವಾದ: ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಚಿವ ಡಾ.ಕೆ ಸುಧಾಕರ್…

ಬೆಂಗಳೂರು,ಜು,16,2020(www.justkannada.in): ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಇಂದು ಇಂದಿರಾನಗರದಲ್ಲಿರುವ ಸಿವಿ ರಾಮನ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಕೋವಿಡ್ ರೋಗಿಗಳ ಚಿಕಿತ್ಸೆ, ಸೌಲಭ್ಯಗಳ ಪರಿಶೀಲನೆ ನಡೆಸಿದರು.visit-cv-raman-public-hospital-covid-patients-minister-dr-k-sudhakar

ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು, ಸಿಬ್ಬಂದಿಗಳ ಬಳಿ ಮಾಹಿತಿ ಪಡೆದು ಸಮಾಲೋಚಿಸಿದ ಸಚಿವ ಡಾ.ಕೆ ಸುಧಾಕರ್ ಕೋವಿಡ್ ರೋಗಿಗಳ ಜತೆ ವಿಡಿಯೋ ಸಂವಾದ ನಡೆಸಿದರು. ಇದೇ ವೇಳೆ  ಲಘು ರೋಗ ಲಕ್ಷಣ ಇರುವವರನ್ನು ದಾಖಲು ಮಾಡಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.visit-cv-raman-public-hospital-covid-patients-minister-dr-k-sudhakar

ಹದಿನೈದು ಹೈ ಪ್ಲೋ ಆಕ್ಸಿಜನ್ ಬೆಡ್ ಪೈಕಿ ಎರಡರಲ್ಲಿ ಮಾತ್ರ ರೋಗಿಗಳನ್ನು ದಾಖಲಿಸಿದ್ದಕ್ಕೆ ಅಧಿಕಾರಿಗಳ ವಿರುದ್ದ ಕೆಂಡಾಮಂಡಲರಾದ ಸಚಿವ ಸುಧಾಕರ್ ಸಂಬಂಧಿಸಿದ ಅಧಿಕಾರಿಗಳನ್ನ ಅಮಾನತು ಮಾಡುವಂತೆ ಸೂಚನೆ ನೀಡಿದರು. ಕೋವಿಡ್ ಕೇರ್ ಸೆಂಟರ್ ಗೆ ಹೋಗಬೇಕಿದ್ದವರಿಗೂ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಕ್ಕೆ ಅಧಿಕಾರಿಗಳಿಗೆ ಸಚಿವ ಸುಧಾಕರ್ ತರಾಟೆ ತೆಗೆದುಕೊಂಡರು.

Key words: Visit -CV Raman- Public Hospital – covid patients-minister-Dr K Sudhakar