ಬೆಂಗಳೂರು,ಅಕ್ಟೋಬರ್,28,2025 (www.justkannada.in): ವಿಧಾನಸಭೆಯಲ್ಲಿ ಸಾಮಾಗ್ರಿಗಳ ಖರೀದಿ ಕುರಿತು ಸ್ಪೀಕರ್ ಯುಟಿ ಖಾದರ್ ಅವರು ಭ್ರಷ್ಟಾಚಾರ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ಸೂಚಿಸಬೇಕು ಎಂದು ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ವಿಧಾನಸಭೆಯಲ್ಲಿ ಮರದ ಕೆತ್ತನೆಯ ಪ್ರಧಾನ ಬಾಗಿಲು, ಶಾಸಕರ ಭವನದಲ್ಲಿ ಹಾಸಿಗೆ ದಿಂಬು ಇತರೆ ವಸ್ತುಗಳ ಖರೀದಿ, ಈ ಸಂಬಂಧ ಕೋಟ್ಯಾಂತರ ದುಂದು ವೆಚ್ಚ ಮಾಡಲಾಗಿದೆ. ಪುಸ್ತಕಮೇಳಕ್ಕೆ 4.5 ಕೋಟಿ ವೆಚ್ಚ ಖರ್ಚು ಮಾಡಿದರು. ಸ್ಪೀಕರ್ ಈ ರೀತಿ ಮಾಡುವ ಅವಶ್ಯಕತೆ ಇತ್ತಾ? ಬೇಕಾದವರಿಗೆ ಟೆಂಡರ್ ಕೊಟ್ಟಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ನಡೆಸಲು ಸರ್ಕಾರ ಸೂಚಿಸಬೇಕು ಎಂದು ಒತ್ತಾಯಿಸಿದರು.
ಸ್ಪೀಕರ್ ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಕುರಿತು ರಾಜ್ಯಪಾಲರಿಗೆ ದೂರು ಸಲ್ಲಿಸುತ್ತೇವೆ ಎಂದು ಕಾಗೇರಿ ಹೇಳಿದ್ದಾರೆ.
Key words: Corruption, allegation, Speaker, UT Khader, Vishweshwar hegde Kageri







