ವಿಶಾಖಪಟ್ಟಣಂ ವಿಷಕಾರಿ ಅನಿಲ ಸೋರಿಕೆ ಪ್ರಕರಣ: 8 ಮಂದಿ ಸಾವು, 800ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ

ವಿಶಾಖಪಟ್ಟಣಂ, 07, ಮೇ 2020 (www.justkannada.in): ಆಂಧ್ರಪ್ರದೇಶದ ವಿಶಾಖಪಟ್ಟಣಂ ಬಳಿ ಇರುವ ಎಲ್ಜಿ ಪಾಲಿರ್ಸ ಕಾರ್ಖಾನೆಯಿಂದ ವಿಷಕಾರಿ ಅನಿಲ ಸೋರಿಕೆಯಾದ ಪರಿಣಾಮ ನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ.

ಇದೇ ವೇಳೆ ಘಟನೆಯಲ್ಲಿ ಕನಿಷ್ಠ 800 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸ್ಥಳಕ್ಕೆ ಆಂಬ್ಯುಲೆನ್ಸ್‌ಗಳು, ಅಗ್ನಿಶಾಮಕ ಸಿಬ್ಬಂಧಿ ಪೊಲೀಸರು ಆಗಮಿಸಿದ್ದು, ಹತ್ತಿರದ ಹಳ್ಳಿಗಳಿಂದ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.