‘ವಿರಾಟಪುರ ವಿರಾಗಿ’ ಸಿನಿಮಾ ಉಚಿತ ಪ್ರದರ್ಶನ ನಾಳೆ.

ಮೈಸೂರು,ಜನವರಿ,16,2024(www.justkannada.in):  ಕಾರಣಿಕ ಪುರುಷ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧರಿಸಿದ ‘ವಿರಾಟಪುರ ವಿರಾಗಿ’ ಸಿನಿಮಾ ಪ್ರದರ್ಶಶನವನ್ನು ಜನವರಿ 17ರಂದು ಸಂಜೆ 4 ಗಂಟೆಗೆ ಬನ್ನಿಮಂಟಪದ ಜೆಎಸ್ಎಸ್ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ಉಚಿತವಾಗಿ ಏರ್ಪಡಿಸಲಾಗಿದೆ.

ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಶ್ರೀ ಗುರುದೇವ ಸೇವಾ ಸಂಸ್ಥೆ (ಸಮಾಧಾನ) ನಿರ್ಮಿಸಿರುವ ಈ ಸಿನಿಮಾವನ್ನು ಬಿ.ಎಸ್. ಲಿಂಗದೇವರು ರಚಿಸಿ, ನಿರ್ದೇಶಿಸಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿಂಬಾಳದ ಮೌನತಪಸ್ವಿ ಜಡೆಯ ಶಾಂತಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸಿನಿಮಾ ವೀಕ್ಷಿಸುವರು.

ಈ ಸಿನಿಮಾ ಬಿಡುಗಡೆಗೂ ಮುನ್ನ ಪ್ರೀಮಿಯರ್ ಪ್ರದರ್ಶನದಲ್ಲಿ ಸುಮಾರು 160 ಹೌಸ್ ಫುಲ್ ಪ್ರದರ್ಶನ ಕಂಡಿದೆ. ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಏಷಿಯನ್ ಸ್ಪರ್ಧಾ ವಿಭಾಗದಲ್ಲಿ ಪ್ರಶಸ್ತಿ ಹಾಗೂ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ ಹುಣಸೂರು ಕೃಷ್ಣಮೂರ್ತಿ ಹೆಸರಲ್ಲಿ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪುರಸ್ಕೃತವಾಗಿದೆ.

‘ಮೆಲಕು ಹಾಕುವ ಗೀತೆ ಬೇರೆ,  ಮನ ಕಲಕುವ ಗೀತೆಯೇ ಬೇರೆ. ಮೆಲುಕು ಹಾಕುವ ಗೀತೆ ಖುಷಿ ಕೊಟ್ಟರೆ ಮನ ಕಲಕುವ ಗೀತೆ ಆನಂದ ತರುತ್ತದೆ. ಎಷ್ಟೋ ದಿನಗಳ ನಂತರ ಮೆಲುಕು ಹಾಕಬಹುದಾದ ಹಾಗೆಯೇ ಮನಕ್ಕೂ ತಟ್ಟುವ ಗೀತೆ ನೋಡಲಾಗದೇ ದೇವಾ…’ಎಂದು  ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ ಕಾಸರವಳ್ಳಿ ಹೇಳಿದ್ದಾರೆ.

ಹಿರಿಯ ನಟ ದತ್ತಣ್ಣ ಅವರು ‘ಇದು ಒಂದು ಬಾರಿ ನೋಡಿ ಮರೆತುಬಿಡಬಹುದಾದ ಚಿತ್ರವಲ್ಲ. ಪದೇ ಪದೇ ನೋಡಬಹುದಾದ/ ನೋಡಬೇಕಾದ/ ನೋಡಿದ ಅನುಭವವನ್ನು ಮೆಲುಕು ಹಾಕುತ್ತಾ ಅದರ ವಸ್ತುವಿಶೇಷವನ್ನು ವಿಶ್ಲೇಷಣೆಗೆ ಒಳಗಾಗಿಸಿ ಅದರ ರಸಾಸ್ವಾದನೆಯನ್ನು ಹಿಗ್ಗಿಸಿಕೊಳ್ಳಬಹುದಾದ ಚಿತ್ರ’ ಎಂದಿದ್ದಾರೆ.

Key words: Viratpur Viragi-movie -free –show-tomorrow.