ಚಿಕ್ಕಪ್ಪನ ಅಂತಿಮ ವಿಧಿವಿಧಾನ ನಡೆಸಿಕೊಟ್ಟ ವಿನಯ್ ರಾಜ್’ಕುಮಾರ್

ಬೆಂಗಳೂರು, ಅಕ್ಟೋಬರ್ 31, 2021 (www.justkannada.in): ಪುನೀತ್ ರಾಜ್ ಕುಮಾರ್ ಅವರ ಅಂತಿಮ ವಿಧಿವಿಧಾನಗಳನ್ನು ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ನಡೆಸಿಕೊಟ್ಟರು.

ಸರ್ಕಾರದ ಗೌರವ ಸಮರ್ಪಣೆ ಬಳಿಕ ನಡೆದ ಕೌಟುಂಬಿಕ ವಿಧಿವಿಧಾನಗಳನ್ನು ವಿನಯ್ ನಡೆಸಿಕೊಟ್ಟರು. ವಿನಯ್ ರಾಜ್ ಕುಮಾರ್ ಕುಟುಂಬಸ್ಥರ ಜೊತೆಯಲ್ಲಿ ಗಣ್ಯರೂ ಕೂಡಾ ಪುನೀತ್ ರಾಜಕುಮಾರ್ ಅವರ ದೇಹದ ಮೇಲೆ ಉಪ್ಪು ಮತ್ತು ಮಣ್ಣು ಸಮರ್ಪಿಸುವುದರೊಂದಿಗೆ ಪುನೀತ್ ರಾಜಕುಮಾರ್ ಎಂಬ ಕಲಾಲೋಕದ ತಾರೆ ಮಣ್ಣಲ್ಲಿ ಮಣ್ಣಾಗಿ ಬೆರೆತಾಗ, ಎಲ್ಲರ ಕಣ್ಣಾಲಿಗಳು ತುಂಬಿದ್ದವು.

ಅಂತಿಮವಾಗಿ ಕುಟುಂಬ ಸದಸ್ಯರು ಸಮಾಧಿಗೆ ಪೂಜೆ ಸಲ್ಲಿಸಿದರು. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪುತ್ರಿಯರೊಂದಿಗೆ ಕಣ್ಣೀರ ಸುರಿಸುತ್ತಲೇ ಅಂತಿಮ ಪೂಜೆ ನೆರವೇರಿಸಿದರು.