Tuesday, August 4, 2026

BDA Apartments

Home Front Page ಬಿಎಸ್ ವೈ ಸಿಎಂ ಆಗಿದ್ದಾಗ ವಿಜಯೇಂದ್ರ ಡೂಪ್ಲಿಕೇಟ್ ಸಹಿ:  ಈ ಬಗ್ಗೆ ತನಿಖೆಯಾಗಲಿ- ಬಿ.ಕೆ ಹರಿಪ್ರಸಾದ್

ಬಿಎಸ್ ವೈ ಸಿಎಂ ಆಗಿದ್ದಾಗ ವಿಜಯೇಂದ್ರ ಡೂಪ್ಲಿಕೇಟ್ ಸಹಿ:  ಈ ಬಗ್ಗೆ ತನಿಖೆಯಾಗಲಿ- ಬಿ.ಕೆ ಹರಿಪ್ರಸಾದ್

ಮೈಸೂರು,ಆಗಸ್ಟ್,9,2024 (www.justkannada.in): ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿವೈ ವಿಜಯೇಂದ್ರ ಡೂಪ್ಲಿಕೇಟ್ ಸಹಿ ಹಾಕಿದ್ದಾರೆ. ಎಷ್ಟು ಡೂಪ್ಲಿಕೇಟ್ ಸಹಿ ಹಾಕಿದ್ದಾರೆ ಎಂಬುದನ್ನ ತನಿಖೆ ಮಾಡಲಿ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಬಿ.ಕೆ ಹರಿಪ್ರಸಾದ್,  ಬಿಜೆಪಿ ಜೆಡಿಎಸ್ ನವರು ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಮಸಿ ಬಳೆಯುವ ಕೆಲಸಕ್ಕೆ ಬಿಜೆಪಿ, ಜೆಡಿಎಸ್ ಮುಂದಾಗಿದೆ. ಈ ಹಿಂದಿನಿಂದಲೂ ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಿ ಕಾಂಗ್ರೆಸ್ ವರ್ಚಸ್ಸು ಕುಗ್ಗಿಸಲಿಕ್ಕೆ ಮುಂದಾಗಿದ್ದರು. ಮಹಾತ್ಮಾ ಗಾಂಧಿಯವರ ಚಳುವಳಿಗೂ ವಿರುದ್ಧವಾಗಿ ಬಿಜೆಪಿ ಪೂರ್ವಜರು ಪ್ರಯತ್ನ ಪಟ್ಟಿದ್ದರು. ಬಿಜೆಪಿಯವರಿಗೆ ತ್ರಿವರ್ಣ ಧ್ವಜದ ಬಗ್ಗೆ ಗೌರವವಿಲ್ಲ.

ರಾಷ್ಟ್ರಭಕ್ತಿಯ ಹೆಸರಿನಲ್ಲಿ ನಮಗೆ ರಾಷ್ಟ್ರ ಪ್ರೇಮ ಹೇಳಿಕೊಡಲಿಕ್ಕೆ ಬರುತ್ತಾರೆ. ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುವ ಬಿಜೆಪಿಯವರು ಕಾಂಗ್ರೆಸ್ ವಿರುದ್ಧವಾಗಿದ್ದಾರೆ. ಆಪರೇಷನ್ ಕಮಲ ಮೂಲಕ ಸರ್ಕಾರ ಕೆಡವಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದು  ಬಿಕೆ ಹರಿಪ್ರಸಾದ್ ಕಿಡಿಕಾರಿದರು.

Key words: Vijayendra, duplicate, signature, BSY, BK Hariprasad