Sunday, September 20, 2026

BDA Apartments

ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರಿಂದ ಕವನ ಸಂಕಲನ ಆಹ್ವಾನ BDA JK_Adv BDA Adv
Home Front Page ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರಿಂದ  ಕವನ ಸಂಕಲನ ಆಹ್ವಾನ

ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರಿಂದ  ಕವನ ಸಂಕಲನ ಆಹ್ವಾನ

ಮೈಸೂರು, ಜನವರಿ,30,2025 (www.justkannada.in): ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು  ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ ವಿಮರ್ಶಕಿ ಹಾಗೂ ಲೇಖಕಿ  ಡಾ. ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022 ರಲ್ಲಿ ಸ್ಥಾಪಿಸಿರುವ  ‘ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಮಹಿಳೆಯರ  ಕವನ ಸಂಕಲನವನ್ನು  ಆಹ್ವಾನಿಸಿದೆ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರಿಂದ ಕವನ ಸಂಕಲನ ಆಹ್ವಾನ nypunya1

2020 -2024ರ ಅವಧಿಯಲ್ಲಿ  ಪ್ರಥಮ ಮುದ್ರಣ ಕಂಡಿರುವ ಕವನ ಸಂಕಲನವನ್ನು ಮಾತ್ರ ಪರಿಗಣಿಸಲಾಗುವುದು.  ಪ್ರಶಸ್ತಿ 25,000 ರೂ. ನಗದು ಮತ್ತು ಫಲಕವನ್ನು ಒಳಗೊಂಡಿದ್ದು,  ಜೂನ್ 1 ರಂದು ಮೈಸೂರಿನಲ್ಲಿ ಪ್ರದಾನ ಮಾಡಲಾಗುವುದು.

ಆಸಕ್ತ ಪ್ರಕಾಶಕರು ಅಥವಾ ಲೇಖಕಿಯರು ಸಂಕಲನದ ನಾಲ್ಕು ಪ್ರತಿಗಳನ್ನು ಮಾರ್ಚ್ 15 ರೊಳಗೆ ಕಳುಹಿಸುವಂತೆ‌ ಕೋರಲಾಗಿದೆ.

ವಿಳಾಸ:  ಎಂ. ಎಸ್. ವೇದಾ, ಅಲಂಪು, ಮನೆ ಸಂಖ್ಯೆ 1257, ಪಡುವಣ ರಸ್ತೆ, 4ನೇ ಕ್ರಾಸ್, ಟಿ. ಕೆ. ಬಡಾವಣೆ, 4ನೇ ಹಂತ, ಕುವೆಂಪುನಗರ, ಮೈಸೂರು -570023. ಮೊಬೈಲ್: 9481814836.

Key words: Vijaya Dabbe,  Literary Award,  Poetry, invited, female writers