ನ.15 ರಂದು ವಿದುಷಿ ಸಂಗೀತಾ ಕಟ್ಟಿ ಅವರಿಂದ ‘ಭಜನ್ ಸಂಧ್ಯಾ’ ಕಾರ್ಯಕ್ರಮ

ಬೆಂಗಳೂರು,ನವೆಂಬರ್,14,2025 (www.justkannada.in): ರಾಷ್ಟ್ರೋತ್ಥಾನ ಪರಿಷತ್‌ ನ ಸಾಹಿತ್ಯ ವಿಭಾಗ ನಡೆಸುತ್ತಿರುವ 5ನೇ ಕನ್ನಡ ಪುಸ್ತಕ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ನವೆಂಬರ್‌ 15 ರಂದು ಸಂಜೆ 6 ಗಂಟೆಗೆ ನಾಡಿನ ಖ್ಯಾತ ಗಾಯಕಿ ವಿದುಷಿ ಸಂಗೀತಾ ಕಟ್ಟಿ ಹಾಗೂ ತಂಡದವರಿಂದ ಭಜನ್‌ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಸಂಗೀತಾ ಕಟ್ಟಿಯವರು ದಾಸವಾಣಿ, ವಚನಗಳು, ಭಜನೆ ಹಾಗೂ ಅಭಂಗಕ್ಕೆ ಧ್ವನಿಯಾಗಲಿದ್ದಾರೆ.

ಈ ಕಾರ್ಯಕ್ರಮವು ಚಾಮರಾಜಪೇಟೆಯಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ ನ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದೆ. ಸಂಗೀತಾ ಕಟ್ಟಿಯವರ ಭಜನ್‌ ಸಂಧ್ಯಾದ ಆಲಾಪವು ನಿಮ್ಮ ವಾರಾಂತ್ಯದ ಇಳಿಸಂಜೆಯನ್ನು ವಿಶೇಷವನ್ನಾಗಿಸುವಲ್ಲಿ ಎರಡು ಮಾತಿಲ್ಲ ಎಂದು ಪ್ರಕಟಣೆ ತಿಳಿಸಿದೆ.

Key words: Bhajan Sandhya, program, Vidushi Sangeeta, November 15