Saturday, September 12, 2026

BDA Apartments

ಪ್ರಕರಣದಲ್ಲಿ ಒತ್ತಡ ಹಾಕಿಲ್ಲ: ನನಗೂ ಜಗದೀಶ್ ಗೂ ಸಂಬಂಧವಿಲ್ಲ- ಸಚಿವ ಸಿ.ಸಿ ಪಾ...
Home Front Page ಪ್ರಕರಣದಲ್ಲಿ ಒತ್ತಡ ಹಾಕಿಲ್ಲ: ನನಗೂ ಜಗದೀಶ್ ಗೂ ಸಂಬಂಧವಿಲ್ಲ- ಸಚಿವ ಸಿ.ಸಿ ಪಾಟೀಲ್ ಸ್ಪಷ್ಟನೆ.

ಪ್ರಕರಣದಲ್ಲಿ ಒತ್ತಡ ಹಾಕಿಲ್ಲ: ನನಗೂ ಜಗದೀಶ್ ಗೂ ಸಂಬಂಧವಿಲ್ಲ- ಸಚಿವ ಸಿ.ಸಿ ಪಾಟೀಲ್ ಸ್ಪಷ್ಟನೆ.

ಬೆಂಗಳೂರು,ಜನವರಿ,6,2023(www.justkannada.in):  ವಿಧಾನಸೌಧದಲ್ಲಿ 10 ಲಕ್ಷ ರೂ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಲೋಕೋಪಯೋಗಿ ಸಚಿವರಿಗೆ ನೀಡಲು ಹೋಗಿರಬಹುದು ಟೀಕಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ  ಸಚಿವ ಸಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸಿ.ಸಿ ಪಾಟೀಲ್, ಆ ಹಣವನ್ನು ಸಿದ್ದರಾಮಯ್ಯಗೆ ಕೊಡಲು ತಂದಿರಬಹುದೆಂದು ನಾನು ಹೇಳಬಹುದಲ್ವಾ ಎಂದು ಪ್ರಶ್ನಿಸಿದರು. ಹಣ ತಂದಿದ್ದ ಜಗದೀಶ್​ರನ್ನು​ ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖಾ ವರದಿ ಬಂದ ನಂತರ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದರು.ಪ್ರಕರಣದಲ್ಲಿ ಒತ್ತಡ ಹಾಕಿಲ್ಲ cc patil

ಪ್ರಕರಣದಲ್ಲಿ ನಾನು ಯಾವುದೇ ಒತ್ತಡ ಹಾಕಿಲ್ಲ ದುಡ್ಡು ಸಿಕ್ಕಿದ್ದು ವಿಧಾನಸೌಧದ ಆವರಣದೊಳಗೆ. ಜಗದೀಶ್ ಗೂ ನನಗೂ ಸಂಬಂಧ ಇಲ್ಲ.  ಹಣ ಕೊಡೋದಿದ್ರೆ ವಿಧಾನಸೌಧಕ್ಕೆ ಬರಬೇಕಿತ್ತಾ..?  ಹಣಕ್ಕೆ ಸೂಕ್ತ ದಾಖಲೆ ಕೊಡದಿದ್ದರೇ ಕ್ರಮ ಆಗುತ್ತಿದೆ, ನಾನು ಇದರ ಹೊಣೆ ಯಾಕೆ ಹೊತ್ತಿಕೊಳ್ಳಲಿ ಸಚಿವ ಸಿಸಿ ಪಾಟೀಲ್ ಹೇಳಿದರು.

Key words:  vidhana soudha- money-find-case-minister-CC Patil