ಹಿರಿಯ ನಟಿ ತಬಸ್ಸುಮ್ ನಿಧನ

ಬೆಂಗಳೂರು, ನವೆಂಬರ್ 20, 2022 (www.justkannada.in): ಮಕ್ಕಳ ಪಾತ್ರ ಮತ್ತು ಬಾಲಿವುಡ್ ಟಾಕ್ ಶೋಗೆ ಹೆಸರುವಾಸಿಯಾಗಿದ್ದ ಹಿರಿಯ ನಟಿ  ತಬಸ್ಸುಮ್ ನಿಧನರಾಗಿದ್ದಾರೆ.

ತಬಸ್ಸುಮ್ ಹೃದಯ ಸ್ತಂಭನದಿಂದ ನಿಧನರಾದರು ಎಂದು ಅವರ ಮಗ ಹೋಶಾಂಗ್ ಗೋವಿಲ್ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದಾಗಿ ಅವರು ನಿನ್ನೆ ರಾತ್ರಿ 8.40 ರ ಸುಮಾರಿಗೆ ನಿಧನರಾದರು. ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದರು.

1947 ರಲ್ಲಿ ಬಾಲನಟಿ ಬೇಬಿ ತಬಸ್ಸುಮ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 1972 ರಿಂದ 1993 ರವರೆಗೆ ಜನಪ್ರಿಯ ದೂರದರ್ಶನ ಸೆಲೆಬ್ರಿಟಿ ಟಾಕ್ ಶೋ ‘ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್’ ಆಯೋಜಿಸಿದರು.

‘ಮೇರಾ ಸುಹಾಗ್'(1947), ‘ಮಂಜಧರ್'(1947) ಮತ್ತು ‘ಬರಿ ಬೆಹೆನ್'(1949). ‘ದೀದಾರ್'(1951). ಕೊನೆಯದಾಗಿ ಸ್ವರ್ಗ್(1990) ನಲ್ಲಿ ಕಾಣಿಸಿಕೊಂಡಿದ್ದರು.