ಎಸ್.ನಿಜಲಿಂಗಪ್ಪ ಅವರಿಗೆ ಭಾರತ ರತ್ನ ಕೊಡಿಸುವಂತೆ ಸಿಎಂಗೆ ಮನವಿ ಮಾಡಿದ ವಾಟಾಳ್ ನಾಗರಾಜ್.

ಬೆಂಗಳೂರು,ನವೆಂಬರ್,1,2021(www.justkannada.in):  ನಿಜಲಿಂಗಪ್ಪ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಿಸುವಂತೆ  ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.

ಕನ್ನಡ ರಾಜ್ಯೋತ್ಸವ ಸಮಿತಿಯಿಂದ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ , ಎಸ್.ನಿಜಲಿಂಗಪ್ಪ ಅವರಿಗೆ ಭಾರತ ರತ್ನ  ನೀಡಬೇಕು. ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳನ್ನ ಭೇಟಿ ಮಾಡಿ ನಿಜಲಿಂಗಪ್ಪನವರಿಗೆ ಭಾರತಗ ರತ್ನ ಕೊಡಿಸುವ ಕೆಲಸ ಮಾಡಬೇಕು. ನಿಜಲಿಂಗಪ್ಪನವರ ಹೆಸರಿನಲ್ಲಿ ರಾಜ್ಯದ ಯಾವುದಾದ್ರು ಜಿಲ್ಲೆಯಲ್ಲಿ 1 ಸಾವಿರ ಎಕರೆ ಜಾಗದಲ್ಲಿ ಸ್ಮಾರಕ ಆಗಬೇಕು ಎಂದು  ಮನವಿ ಮಾಡಿದರು.

ವಾಟಾಳ್ ನಾಗರಾಜ್ ಮನವಿಗೆ ಪ್ರತಿಕ್ರಿಯಿಸಿದ  ಬಸವರಾಜ ಬೊಮ್ಮಾಯಿ, ಇದರ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ. ಕೇಂದ್ರ ಗೃಹ ಸಚಿವರ ಜೊತೆಯೂ ಚರ್ಚೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

Key words: vatal Nagaraj -appealed – CM – baharatha ratna-S. Nijalingappa