ಬೆಂಗಳೂರು,ಮೇ,28,2025 (www.justkannada.in): ತಮಿಳಿನಿಂದ ಕನ್ನಡ ಹುಟ್ಟಿತು’ ಎಂದು ‘ಥಗ್ ಲೈಫ್’ ಸಿನಿಮಾದ ಇವೆಂಟ್ ನಲ್ಲಿ ಮಾತನಾಡುವ ವೇಳೆ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ ವಿರುದ್ದ ರಾಜ್ಯದಲ್ಲಿ ಭಾರಿ ಆಕ್ರೊಶ ವ್ಯಕ್ತವಾಗಿದೆ. ಇದೀಗ ನಟ ಕಮಲ್ ಹಾಸನ್ ವಿರುದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ಹೇಳಿಕೆ ಕುರಿತು ಮಾತನಾಡಿರುವ ವಾಟಾಳ್ ನಾಗರಾಜ್, ನಟ ಕಮಲ್ ಹಾಸನ್ ಹೇಳಿಕೆ ಖಂಡನೀಯ. ನಟ ಕಮಲ್ ಹಾಸನ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕಮಲ್ ಹಾಸನ್ ಬರೀ ಕ್ಷಮಾಪಣೆ ಕೇಳಿದ್ರೆ ಸಾಕಾಗುವುದಿಲ್ಲ. ರಾಜ್ಯಕ್ಕೆ ಪ್ರವೇಶ ಮಾಡದಂತೆ ಕಮಲ್ ಹಾಸನ್ ಗೆ ಬಹಿಷ್ಕಾರ ಹಾಕಬೇಕು ಕಮಲ್ ಹಾಸನ್ ಚಿತ್ರಗಳನ್ನ ಕರ್ನಾಟಕದಲ್ಲಿ ಬಹಿಷ್ಕಾರ ಹಾಕಬೇಕಾಗುತ್ತೆ ಎಂದು ಹೇಳಿದರು.
Key words: Actor, Kamal Haasan, , Statement, Kannada, Vatal Nagaraj