ಎಡವಟ್ಟು ಅಂದ್ರೆ ಯಡಿಯೂರಪ್ಪ ಎಂದ ವಾಟಾಳ್ ನಾಗರಾಜ್, ಪಕ್ಷಾಂತರಿಗಳ ವಿರುದ್ಧ ಪ್ರತಿಭಟನೆ

0
263

ಮೈಸೂರು, ನವೆಂಬರ್ 17, 2019 (www.justkannada.in): ಪಕ್ಷಾಂತರಿಗಳ ವಿರುದ್ದ ವಾಟಾಳ್ ನಾಗರಾಜ್ ಇಂದು ಪ್ರತಿಭಟನೆ ನಡೆಸಿದರು.

ರೈಲ್ವೇ ನಿಲ್ದಾಣ ಮುಂಭಾಗ ಕಪ್ಪು ಬಟ್ಟೆ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷಾಂತರಿಗಳು ಪ್ರಜಾಪ್ರಭುತ್ವ ವ್ಯವಸ್ಥೆ ಗೆ ಮಾರಕ. ಇಂತಹ ಅಭ್ಯರ್ಥಿ ಗಳನ್ನು ಜನ ಸೋಲಿಸಬೇಕು. ಪ್ರತಿ ಕ್ಷೇತ್ರಕ್ಕೆ ಹೋಗಿ ಅವರ ವಿರುದ್ದ ಪ್ರಚಾರ ಮಾಡತ್ತೀನಿ ಎಂದು ಹೇಳಿದರು.

ನಾನು ಮಹಾಲಕ್ಷಿ ಲೇಔಟ್ ಹಾಗೂ ಶಿವಾಜಿ ನಗರದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿನಿ. ಇನ್ನೂ ಮಿಕ್ಕ ಕ್ಷೇತ್ರದಲ್ಲಿ ಆ ಪಕ್ಷಾಂತರಿಗಳ ವಿರುದ್ದ ಪ್ರಚಾರ ಮಾಡತ್ತೀನಿ. ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಬೇಕಿಲ್ಲ. ಅವರ ಭ್ರಷ್ಟಾಚಾರ ಒಂದೇ ನೀತಿಯಾಗಿದೆ ಎಂದು ದೂರಿದರು.

ಯಡಿಯೂರಪ್ಪ ನವರ ಸ್ಥಿತಿ ಬಸ್ಮಾಸುರನ ಸ್ಥಿತಿಯಾಗುತ್ತೆ.. ಯಡಿಯೂರಪ್ಪ ಅಂದ್ರೆ ಎಡವಟ್ಟು, ಎಡವಟ್ಟು ಅಂದ್ರೆ ಯಡಿಯೂರಪ್ಪ ಎಂದು
ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.