ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ: ಇಂದು 2ನೇ ದಿನವೂ ಮುಂದುವರೆದ ಬ್ಯಾಂಕ್ ನೌಕರರ ಮುಷ್ಕರ….

ಬೆಂಗಳೂರು,ಫೆ,1,2020(www.justkannada.in):  ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ ನೌಕರರ ನಿನ್ನೆಯಿಂದ ದೇಶಾದ್ಯಂತ ಎರಡು ದಿನಗಳ ಕಾಲ ಮುಷ್ಕರ ಹೂಡಿದ್ದು, ಇಂದು ಎರಡನೇ ದಿನವೂ ಮುಷ್ಕರ ಮುಂದುವರೆಯಲಿದೆ. ಬ್ಯಾಂಕ್ ನೌಕರರ ವೇತನ ಪರಿಷ್ಕರಣೆ, ಸೂಕ್ತ ಸರ್ಕಾರಿ ಸವಲತ್ತುಗಳನ್ನು ನೀಡುತ್ತಿಲ್ಲ ಎಂದು ಆಕ್ರೋಶ  ಬ್ಯಾಂಕ್ ನೌಕರರು ಜೊತೆಗೆ ಬ್ಯಾಂಕ್ ನೌಕರರನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ  ಎಂದು ಆರೋಪಿಸಿ ಬಂದ್ ಗೆ ಕರೆ ನೀಡಿದ್ದಾರೆ.

ಬ್ಯಾಂಕ್ ಸಿಬ್ಬಂದಿ ನೆನ್ನೆಯಿಂದ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಈಗಾಗಲೇ ಸಾರ್ವಜನಿಕರಿಗೆ ಎ.ಟಿ.ಎಂ.ಗಳಿಗೆ ಹಣಕ್ಕೆ ತೊಂದರೆ ಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಎ.ಟಿ.ಎಂ ಗಳಿಗೂ ಹಣ ವಿಲೇವಾರಿ ಮಾಡಲಾಗಿದೆ. ಬಂದ್ ಸಂದರ್ಭದಲ್ಲಿ ಎಟಿಎಂ ನಲ್ಲಿ ಹಣ ಪಡೆಯಲು ಸೂಚನೆ ನೀಡಲಾಗಿದೆ.

Key words: Various -demands -Bank employees- strike -continues – 2nd day -today.