ಒಂದು ತಿಂಗಳು ಕಾಲ ಪ್ರತಿದಿನ 2 ಗಂಟೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ.

ಬೆಂಗಳೂರು,ಜುಲೈ,8,2023(www.justkannada.in): ಜುಲೈ 10ರಿಂದ  ಒಂದು ತಿಂಗಳ ಕಾಲ ಪ್ರತಿದಿನ 2 ಗಂಟೆಗಳ ಕಾಲ ಮೆಟ್ರೋ ಸಂಚಾರ ಬಂದ್ ಆಗಲಿದೆ.

ಜುಲೈ 10ರಿಂದ ಆಗಸ್ಟ್​ 9ರವರೆಗೆ ಅಂದರೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಜು.10ರಿಂದ ಆ.9ರವರೆಗೆ ಪ್ರತಿದಿನ 2 ತಾಸು ಮೆಟ್ರೋ ಸಂಚಾರ ಬಂದ್ ಮಾಡಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪತ್ರಿಕೆ ಪ್ರಕಟಣೆ ಹೊರಡಿಸಿದೆ.

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ ವಿಎಸ್ ರಸ್ತೆ, ಕೆಆರ್ ಪುರಂ ವೈಟ್ ಫಿಲ್ಡ್ ನಡುವಿನ ಕಾಮಗಾರಿ ಹಿನ್ನೆಲೆ ಒಂದು ತಿಂಗಳವರೆಗೆ ಬೆಳಿಗ್ಗೆ 5ರಿಂದ ಬೆಳಿಗ್ಗೆ 7ಗಂಟೆವರೆಗೆ ಮೆಟ್ರೋ ಬಂದ್ ಆಗಲಿದೆ. ಉಳಿದಂತೆ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಯಥಾಸ್ಥಿತಿ ಇರಲಿದೆ ಎಂದು  ಬಿಎಂ ಆರ್ ಸಿಎಲ್ ಮಾಹಿತಿ ನೀಡಿದೆ.

Key words:  Variation – metro -traffic – 2 hours -every day – month.