‘ವಂದೇ ಮಾತರಂ’ ಎಲ್ಲರಿಗೂ ಸ್ಪೂರ್ತಿ, ರಾಷ್ಟ್ರೀಯ ಗೀತೆ ಅನ್ನೋದು ಹೆಮ್ಮೆಯ ಸಂಕೇತ- ಪ್ರಧಾನಿ ಮೋದಿ

ನವದೆಹಲಿ,ಡಿಸೆಂಬರ್,8,2025 (www.justkannada.in): ‘ವಂದೇ ಮಾತರಂ’ ಗೀತೆ ಎಲ್ಲರಿಗೂ ಸ್ಪೂರ್ತಿ, ರಾಷ್ಟ್ರೀಯ ಗೀತೆ ಅನ್ನೋದು ಹೆಮ್ಮೆಯ ಸಂಕೇತ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,  ವಂದೇ ಮಾತರಂ ಗೀತೆ ಎಲ್ಲರಿಗೂ ಸ್ಪೂರ್ತಿ,  ಸ್ವಾತಂತ್ರ ಹೋರಾಟಗಾರರ ಆದರ್ಶ. ಸ್ವಾತಂತ್ರ ಹೋರಾಟಕ್ಕೆ ಪ್ರೇರಣೆಯಾಗಿತ್ತು. ಶಕ್ತಿಯನ್ನು ತುಂಬಿತ್ತು  ನಾವು ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿದ್ದೇವೆ ಎಂದರು.

ವಂದೇಮಾತರಂಯನ್ನು ಬ್ರಿಟಿಷರೂ ಬಳಸುತ್ತಿದ್ದರು.  ವಂದೇ ಮಾತರಂ ಪ್ರಾಯಶ್ಚಿತ್ತದ ಮಾರ್ಗವನ್ನು ತೋರಿಸಿದ ಘೋಷಣೆಯಾಗಿತ್ತು.  ವಂದೇ ಮಾತರಣ ಗೀತೆ ಕುರಿತು ಲೋಕಸಭೆಯಲ್ಲಿ ಚರ್ಚೆಗೆ 10 ಗಂಟೆ ಮೀಸಲು ಇಡಲಾಗುತ್ತದೆ ಎಂದು ಪ್ರಧಾನಿ ಮೋದಿ ನುಡಿದರು.

Key words: ‘Vande Mataram, inspiration, everyone, PM Modi