ವಾಲ್ಮೀಕಿ ನಿಗಮ ಹಗರಣ: ಶಾಸಕ ದದ್ದಲ್ ಮಾಜಿ ಪಿಎ ಪಂಪಣ್ಣ ED ವಶಕ್ಕೆ

ಬೆಂಗಳೂರು,ಜುಲೈ,11,2024 (www.justkannada.in): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿಂತೆ  ಕಾಂಗ್ರೆಸ್​ ಶಾಸಕ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್  ಮಾಜಿ ಆಪ್ತ ಸಹಾಯಕ ಪಂಪಣ್ಣನನ್ನ ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ರಾಥೋಡ್ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ರಾಯಚೂರಿನಲ್ಲಿ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.  2 ಬ್ಯಾಗ್ ದಾಖಲೆ ಸಮೇತ ಇಡಿ ಅಧಿಕಾರಿಗಳು ಪಂಪಣ್ಣ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ತೀವ್ರಗೊಳಿಸಲಿದ್ದಾರೆ.

ಕೆಲ ದಿನಗಳ ಹಿಂದೆ ಪಿಎ ಹುದ್ದೆಗೆ ರಾಜೀನಾಮೆ ನೀಡಿರುವ ಪಂಪಣ್ಣ, ನೂತನವಾಗಿ ಎಂಎಲ್ಸಿಯಾಗಿರುವ ವಸಂತಕುಮಾರ್ ಬಳಿ ಆಪ್ತ ಸಹಾಯಕರಾಗಿ ಸೇರಿಕೊಂಡಿದ್ದರು. ಇದೀಗ ಶಾಸದ ದದ್ದಲ್ ಮನೆಗೆ ಪಂಪಣ್ಣನವರನ್ನು ಇಡಿ ಅಧಿಕಾರಿಗಳು ಕರೆದುಕೊಂಡ ಹೋಗಿದ್ದಾರೆ ಎನ್ನಲಾಗಿದೆ.

Key words: Valmiki Corporation Scam,  MLA, Daddal, former PA, ED