ವಾಲ್ಮೀಕಿ ನಿಗಮ ಅಕ್ರಮ ಹಗರಣ ಸಿದ್ದರಾಮಯ್ಯ ಬುಡಕ್ಕೆ ಬರ್ತಿದೆ- ಆರ್ ಅಶೋಕ್

ಬೆಂಗಳೂರು,ಜೂನ್,28,2024 (www.justkannada.in): ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಅಕ್ರಮ ಹಗರಣ ಸಿದ್ದರಾಮಯ್ಯ ಬುಡಕ್ಕೆ ಬರ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಅಕ್ರಮ ಹಗರಣ ಖಂಡಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿತು. ಈ ಕುರಿತು ಮಾತನಾಡಿದ ಆರ್.ಅಶೋಕ್, ಪ್ರಕರಣವನ್ನ  ಮುಚ್ಚಿ ಹಾಕುಲು ಯತ್ನಿಸಲಾಗುತ್ತಿದೆ.  ಹಗರಣದ ಆರೋಪಿಗಳಿಗೆ ಮಂತ್ರಿ ಧಮ್ಕಿ ಹಾಕುತ್ತಿದ್ದಾರೆ. ಹಗರಣದ ಸೂತ್ರದಾರ ಯಾರೆಂದು ರಾಜ್ಯದ ಜನತೆಗೆ ಗೊತ್ತಿದೆ ಎಂದರು.

ವಿಧಾನಸಭೆಯಲ್ಲೂ ನಮ್ಮ ಹೋರಾಟ ಮುಂದುವರೆಯಲಿದೆ. 2000 ರೂ. ಹಣ ನೀಡುವ ಹೆಸರಲ್ಲಿ ಲೂಟಿ ಮಾಡಲಾಗುತ್ತಿದೆ ಇದು ಜನರಿಗೆ ಅರ್ಥ ಆಗಿದೆ. ರಾಜ್ಯದಲ್ಲಿ ಡೆಂಘ್ಯೂ ಪ್ರಕರಣ ಹೆಚ್ಚುತ್ತಿದ್ದು,  ಕುಡಿಯುವ ನೀರು ಕೊಡುವುಕ್ಕೂ ಸರ್ಕಾರ ಬಳಿ ಹಣವಿಲ್ಲ ರಾಜ್ಯದಲ್ಲಿ ಸರ್ಕಾರ ಪಾಪರ್ ಆಗಿದೆ ಎಂದು ವಾಗ್ದಾಳಿ ನಡೆಸಿದರು.

Key words: Valmiki Corporation, illegal, scam, Siddaramaiah, R Ashok