ಸಿದ್ಧರಾಮಯ್ಯ ಪರ ಪ್ರಚಾರಕ್ಕೆ ವಿ.ಸೋಮಣ್ಣ, ಪ್ರತಾಪ್ ಸಿಂಹ ಅಸಮಾಧಾನ: ನಟ ಶಿವರಾಜ್ ಕುಮಾರ್ ತಿರುಗೇಟು.

ಶಿವಮೊಗ್ಗ,ಮೇ,5,2023(www.justkannada.in):  ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಪರ ನಟ ಶಿವರಾಜ್ ಕುಮಾರ್ ಪ್ರಚಾರ ನಡೆಸಿದ್ದಕ್ಕೆ  ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ನಟ ಶಿವರಾಜ್ ಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿರುವ ನಟ ಶಿವರಾಜ್ ಕುಮಾರ್, ಇದು ಯುದ್ದ ಅಲ್ಲ ಸ್ಪರ್ಧೆ ಅಷ್ಟೆ . ಪುನೀತ್ ಹೆಸರಲ್ಲಿ ಸೇವೆ ಮಾಡುವವರು ಹೇಳಿಕೊಳ್ಳುವುದಿಲ್ಲ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಯೋಚನೆ ಮಾಡಬೇಕು. ನಾನು ಎಲ್ಲರಿಗೂ ಗೌರವ ಕೊಡುತ್ತೇನೆ.  ನನಗೆ ಮಾತನಾಡಲು ಬರಲ್ಲ ಅಂತಲ್ಲ. ಮಾತನಾಡಲು ಇಷ್ಟವಿಲ್ಲ. ನಟ ಸುದೀಪ್ ಕೂಡ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ.  ನಾಳೆ ನಾನು ಸುದೀಪ್ ಮಾತನಾಡಿಸದೆ ಇರಲ್ವಾ…? ನಾನು ಸುದೀಪ್ ಒಳ್ಳೆಯ ಸ್ನೇಹಿತರು ಎಂದು ಟಾಂಗ್ ನೀಡಿದರು.

ಸೋಮಣ್ಣ ವರುಣಾದಲ್ಲಿ ಸ್ಪರ್ಧಿಸೋದು ನನಗೆ ಗೊತ್ತಿರಲಿಲ್ಲ ವಿ.ಸೋಮಣ್ಣ, ಪ್ರತಾಪ್ ಸಿಂಹ ನನಗೆ ಒಳ್ಳೆಯ ಆಪ್ತರು. ಅವರ ಬಗ್ಗೆ ನಮಗೆ ಗೌರವವಿದೆ.  ಬಿಜೆಪಿಯವರು ಯಾರೂ ನನ್ನನ್ನ ಸಂಪರ್ಕ ಮಾಡಿಲ್ಲ. ಕರೆದರೆ ಅವರ ಪರವಾಗಿಯೂ ನಾನು ಪ್ರಚಾರಕ್ಕೆ ಹೋಗುತ್ತೇನೆ . ನಾನೇನು ಚಿಕ್ಕ ಹುಡುಗನಾ…?  ನನಗೂ 61 ವರ್ಷ ಆಯ್ತು ಎಂದು ಶಿವರಾಜ್ ಕುಮಾರ್ ಹೇಳಿದರು.

Key words: V. Somanna- Pratap Simha -upset –Siddaramaiah- campaign-Actor -Shivaraj Kumar