Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Front Page ಉರಿಗೌಡ, ನಂಜೇಗೌಡರ ವಿಚಾರ: ಜೆಡಿಎಸ್ ವಿರುದ್ಧ ಶೋಭಾ ಕರದ್ಲಾಂಜೆ ವಾಗ್ದಾಳಿ

ಉರಿಗೌಡ, ನಂಜೇಗೌಡರ ವಿಚಾರ: ಜೆಡಿಎಸ್ ವಿರುದ್ಧ ಶೋಭಾ ಕರದ್ಲಾಂಜೆ ವಾಗ್ದಾಳಿ

ಬೆಂಗಳೂರು, ಮಾರ್ಚ್ 19, 2023 (www.justkannada.in): ಉರಿಗೌಡ, ನಂಜೇಗೌಡರ ವಿಚಾರಗಳು ಮುನ್ನೆಲೆಗೆ ಬಂದಿದ್ದು, ವಿಪಕ್ಷಗಳು ಇದನ್ನೇ ಅಸ್ತ್ರವಾಗಿಸಿಕೊಂಡು ಆಡಳಿತ ಪಕ್ಷದ ವಿರುದ್ಧ ಕೆಂಡಕಾರುತ್ತಿವೆ. ಇದೀಗ ಈ ಕುರಿತು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಉರಿಗೌಡ, ನಂಜೇಗೌಡ ಸ್ವಾಭಿಮಾನಿಗಳು, ಅವರು ಧರ್ಮಕ್ಕಾಗಿ ಹೋರಾಟ ಮಾಡಿದವರಾಗಿದ್ದಾರೆ. ನಮ್ಮ ದೇವಸ್ಥಾನ ಉಳಿಸುವುದಾಕ್ಕಾಗಿ ಹೋರಾಟ ಮಾಡಿದ್ದಾರೆ ಎಂದಿದ್ದಾರೆ ಶೋಭಾ.

ಹಿಂದುಗಳ ಕ್ರೈಸ್ತ ನರಮೇಧ ಖಂಡಿಸಿ ಹೋರಾಡಿದ್ದಾರೆ. ಹೀಗೆ ಉರಿಗೌಡ ನಂಜೇಗೌಡರ ಬಗ್ಗೆ ಹೆಮ್ಮೆಯ ಇದೆ ಎಂದು ಕಾಂಗ್ರೆಸ್ ಜೆಡಿಎಸ್ ಆರೋಪಕ್ಕೆ ಶೋಭಾ ಕರದ್ಲಾಂಜೆ ತಿರುಗೇಟು ನೀಡಿದ್ದಾರೆ.

ಟಿಪ್ಪು ಸುಲ್ತಾನ್ ಮಂಗಳೂರಿನಲ್ಲಿ ಕ್ರೈಸ್ತರ ಹಾಗೂ ಕೊಡವರ ನರಮೇಧವನ್ನು ಕೊಡಗಿನಲ್ಲಿ ಮಾಡಿದ್ದಾರೆ. ನಂದಿ ಬೆಟ್ಡದ ಮೇಲೆ ಹಿಂದುಗಳನ್ನು ಕೊಂದು ಹಾಕಿದ್ದಾರೆ. ಕನ್ನಡ ವಿರೋಧಿಯಾಗಿದ್ದವರ ವಿರುದ್ಧ ಸೆಟೆದು ನಿಂತವವರು ನಂಜೇಗೌಡ ಉರಿಗೌಡರು ಎಂದು ಜೆಡಿಎಸ್‌, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.