2022ನೇ ಸಾಲಿನ UPSC ಫಲಿತಾಂಶ ಪ್ರಕಟ: 933 ಅಭ್ಯರ್ಥಿಗಳು ಉತ್ತೀರ್ಣ.

ನವದೆಹಲಿ,ಮೇ,23,2023(www.justkannada.in): 2022ನೇ ಕೇಂದ್ರ ಲೋಕಸೇವಾ ಆಯೋಗ (UPSC) ಫಲಿತಾಂಶ ಇಂದು ಪ್ರಕಟವಾಗಿದ್ದು, ಇಶಿತಾ ಕಿಶೋರ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ದೇಶಾದ್ಯಂತ ಒಟ್ಟು 933 ಅಭ್ಯರ್ಥಿಗಳು ಯುಪಿಎಸ್ ಸಿ ಉತ್ತೀರ್ಣರಾಗಿದ್ದಾರೆ. ಮೊದಲ ನಾಲ್ಕು ಶ್ರೇಯಾಂಕಗಳನ್ನು ಮಹಿಳಾ ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ.

ಇಶಿತಾ ಕಿಶೋರ್ ಟಾಪರ್ ಆಗಿದ್ದರೆ, ಗರಿಮಾ ಲೋಹಿಯಾ ದ್ವಿತೀಯ ಸ್ಥಾನ. ಉಮಾ ಆರತಿ ತೃತೀಯ ಸ್ಥಾನ ಮತ್ತು ಸ್ಮೃತಿ ಮಿಶ್ರಾ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಮಯೂರ್ ಹಝರಿಕಾ 5ನೇ ಸ್ಥಾನ,  ಗಹನಾ ನವ್ಯಾ ಜೇಮ್ಸ್ 6ನೇ ಸ್ಥಾನ, ವಾಸೀಂ ಅಹ್ಮದ್ ಭಟ್ 7ನೇ ಸ್ಥಾನ, ಅನಿರುದ್ಧ್ ಯಾದವ್ 8ನೇ ಸ್ಥಾನ, ಕನಿಕಾ ಗೋಯಲ್ 9ನೇ ಸ್ಥಾನ, ರಾಹುಲ್ ಶ್ರೀವಾತ್ಸವ್ 10ನೇ ಸ್ಥಾನ ಪಡೆದಿದ್ದಾರೆ.

ಜೂನ್ 5, 2022ರಂದು ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 22ರಂದು ಬಿಡುಗಡೆ ಮಾಡಲಾಯಿತು. 2022ರ ಸೆಪ್ಟೆಂಬರ್ 16ರಿಂದ 25ರವರೆಗೆ ಮುಖ್ಯ ಪರೀಕ್ಷೆ ನಡೆಸಲಾಯಿತು. ಡಿಸೆಂಬರ್ 6ರಂದು  ಫಲಿತಾಂಶ ಘೋಷಿಸಲಾಗಿತ್ತು. ಮೇ 18ರವರೆಗೆ ಅನಂತರ ಸಂದರ್ಶನ ನಡೆದು ಇಂದು ಅಂತಿಮ ಫಲಿತಾಂಶ ಪ್ರಕಟವಾಗಿದೆ.

Key words: UPSC -Result 2022 –Declared-933 Candidates- Passed