2024ರ ‘ಲೋಕ’ ಯುದ್ಧ ಗೆಲ್ಲಲು ‘ಸ್ನೇಹಿತರ ಸೇನೆ’ ಕಟ್ಟುತ್ತಿವೆ ಯುಪಿಎ-ಎನ್’ಡಿಎ ಕೂಟಗಳು!

ಬೆಂಗಳೂರು, ಜುಲೈ 18, 2023 (www.justkannada.in): ದೇಶವು ಇಂದು ಎರಡು ಪ್ರಮುಖ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಅದು ರಾಷ್ಟ್ರದ ಜನರ ಭವಿಷ್ಯವನ್ನು ಮಾರ್ಗದರ್ಶನ ಮಾಡುವ ಗುರಿಯನ್ನು ಹೊಂದಿದೆ.

ದೇಶದ ಸಿಲಿಕಾನ್  ಸಿಟಿ ಮತ್ತು ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಒಂದಾದ ಬೆಂಗಳೂರಲ್ಲಿ ನಡೆಯುತ್ತಿರುವ ವಿಪಕ್ಷಗಳ ನಾಯಕರ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ 24 ವಿರೋಧ ಪಕ್ಷಗಳ ನಾಯಕರ ಸಮಾವೇಶ ದೇಶಕ್ಕೆ ಸಮರ್ಥ ಮತ್ತು ಶಕ್ತಿಯುತ ರಾಜಕೀಯ ಪರ್ಯಾಯ ರೂಪಿಸುವ ಜತೆಗೆ ಹತ್ತು ವರ್ಷಗಳ ಮೋದಿ ಆಡಳಿತವನ್ನು ಕೊನೆಗಾಣಿಸುವ ಪ್ರಯತ್ನಕ್ಕೆ ಕೈಹಾಕಿದೆ.

ರಾಷ್ಟ್ರ ರಾಜಧಾನಿ ದೆಹಲಿ ಎನ್‌ಡಿಎ ಮಿತ್ರಪಕ್ಷಗಳ ಒಗ್ಗಟ್ಟು ಪ್ರದರ್ಶನಕ್ಕೆ ಆತಿಥ್ಯ ವಹಿಸುತ್ತಿದೆ. ಕಮಲ ಪಕ್ಷದ ಈ ಪ್ರಯತ್ನ ಎನ್‌ಡಿಎ ಬಲವನ್ನು ತೋರಿಸಲು ಮಾತ್ರವಲ್ಲದೆ ಅಧಿಕಾರ ಉಳಿಸಿಕೊಳ್ಳಲು ಹೊಸ ಮಿತ್ರರನ್ನು ಸ್ವಾಗತಿಸಿ ತನ್ನ ನೆಲೆಯನ್ನು ವಿಸ್ತರಿಸಯವ ಪ್ರಯತ್ನವಾಗಿದೆ.

ರಾಜಕೀಯ ಶಕ್ತಿ ಪ್ರದರ್ಶನ ಎಂದೇ ಬಿಂಬಿತವಾಗಿರುವ ಎರಡೂ ಸಭೆಗಳು ಆಯಾ ಕಡೆಯಿಂದ ತೀವ್ರ ಟೀಕೆಗೆ ಗುರಿಯಾಗಿವೆ. ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನವನ್ನು ಬಿಜೆಪಿ ಅಧಿಕಾರಕ್ಕಾಗಿ ಪೈಪೋಟಿ ಎಂದು ಬಣ್ಣಿಸಿದರೆ, ವಿರೋಧ ಪಕ್ಷದ ನಾಯಕರು ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿಪಕ್ಷಗಳ ಎರಡನೇ ಸಭೆಯು 2024 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಲಿನ ಗುಂಡಿ ತೋಡಲು ನಡೆಸುತ್ತಿರುವ ಪ್ರಯತ್ನವಾಗಿದೆ.

ವಿರೋಧ ಪಕ್ಷದ ನಾಯಕರಾದ ವಿಶೇಷವಾಗಿ ಬಿಹಾರ ಸಿಎಂ ನಿತೀಶ್‌ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕರ್ನಾಟಕ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಯ ವಿಜಯದ ಕಹಳೆಯನ್ನು ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪುನರಾವರ್ತಿಸಿ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ.

ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿಗೆ ಕಾಂಗ್ರೆಸ್ ಹೀನಾಯ ಸೋಲುಣಿಸಿದೆ. ಹಿಂದೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಿಜೆಪಿಗೆ ಹೀನಾಯವಾಗಿ ಸೋಲುಣಿಸಿತ್ತು. ಪಶ್ಚಿಮ ಬಂಗಾಳ, ತಮಿಳುನಾಡು, ರಾಜಸ್ಥಾನ, ಕೇರಳ ಚುನಾವಣೆಗಳಲ್ಲಿ ಸೋತ ನಂತರ ಕಮಲ ಪಕ್ಷ ಸಹಜವಾಗಿಯೇ ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಎಚ್ಚರದಿಂದಿರುವಂತೆ ಮಾಡಿದೆ.

ಈ ವರ್ಷ ಕರ್ನಾಟಕದಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಮೋಘ ಗೆಲುವು ಕಾಂಗ್ರೆಸ್ ಮುಕ್ತ ಭಾರತವನ್ನು ಸಂಘಟಿಸುತ್ತಿರುವ ಬಿಜೆಪಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ವಿಜಯವು ವಾಸ್ತವಿಕವಾಗಿ ಬಿಜೆಪಿಯನ್ನು ದಕ್ಷಿಣ ಭಾರತದಿಂದ ಹೊರಹಾಕಿತ್ತು. ಹೀಗಾಗಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ ಮತ್ತು ಮೋದಿ ಸಣ್ಣ ಪಕ್ಷಗಳನ್ನು ಸೆಳೆಯುವ ಮೂಲಕ ಎನ್‌ಡಿಎ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಜನಸೇನಾ ಸಂಸ್ಥಾಪಕ ಮತ್ತು ನಟ ಪವನ್ ಕಲ್ಯಾಣ್. ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಹಲವರು ಇತರರು ಎನ್‌ಡಿಎ ಸೆಳೆತಕ್ಕೆ ಸಿಕ್ಕಿದ್ದಾರೆ.

ದೇಶದ ರಾಜಕೀಯ ವಲಯದಲ್ಲಿ ಸಮ್ಮಿಶ್ರ ರಾಜಕಾರಣ ಹೊಸ ವಿದ್ಯಮಾನವೇನಲ್ಲ. ರಾಷ್ಟ್ರವು 1970ರಿಂದಲೇ ಇದಕ್ಕೆ ಸಾಕ್ಷಿಯಾಗಿದೆ. ಭಾರತ ಯುಪಿಎ ಮತ್ತು ಎನ್’ಡಿಎ ಜೊತೆಗೆ ನ್ಯಾಷನಲ್ ಫ್ರಂಟ್, ಯುನೈಟೆಡ್ ಫ್ರಂಟ್ ರಾಜಕೀಯವನ್ನು ನೋಡಿದೆ. ಈ ನಡುವೆ ಈ ಬಿರುಸಿನ ರಾಜಕೀಯ ಬೆಳವಣಿಗೆಯ ನಡುವೆಯೇ ಜೆಡಿಎಸ್ ನಲುಗಿದಂತಿದೆ. ಸದ್ಯಕ್ಕೆ ದೇವೇಗೌಡರ ಪಕ್ಷ ಯುಪಿಎ ಅಥವಾ ಎನ್‌ಡಿಎ ಭಾಗವಾಗಿಲ್ಲ.

M.SIDDARAJU, SENIOR JOURNALIST
  • ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು

 

 

 

English Summary: The country is witnessing two major political show of strength today, that are aimed at guiding the destiny of its people vis-a-vis, the nation.

    While Bengaluru, the silicon valley of India and one of the happening city of Southern India, is hosting a conclave of 24 Opposition parties, that are arraigned against Narendra Modi government, engaged in cobbling up a viable and powerful political alternative to this country in its bid to end ten year Modi rule.
     The national capital Delhi is playing host to NDA allies , in an attempt by bjp not only to show case NDA strength and also to enlarge its base, by welcoming new allies to retain power.
     Both the meets, which are billed as political show of strength, have drawn sharp criticisms from respective sides. While BJP branded opposition unity effort as list for power, the opposition leaders have lashed out Modi , and took a dig saying their meeting, the second one in recent times, has brought jitters to prime minister, whom they have wowed to defeat in 2024. Lok Sabha polls.
      The opposition party leaders especially Bihar CM Nitishkumar, West Bengal CM Mamatha Banerjer, Tami Nadu CM M K Stalin, Delhi CM Aravind Kejriwal, besides Host state CM Siddaeamaiah are upbeat and banking on the Karnataka victory in assembly election to replicate the model n the next year parliament election.
    The Congress handed out a humiliating drubbing to ruling BJP in Karnataka in the May election. Earlier Congress gave a drubbing to BJP in Himachal Pradesh.
   BJP‌, of course, which is wary of opposition unity and whose morale is on a slide after loosing elections in West Bengal, Ramil Nady, Rajasthan, Kerala and reverses the n Bihar where his ally JDU dumped Lotus, besides Chattisgarh.
     The splendid victory of Congress in Karnataka this year has served as a nightmare to BJP which has been orchestrating Congress mukta Bharat. The congress triumph in Karnataka virtually threw BJP out of Southern India. BJP lost the only state it ruled by prioxy, not by people’s mandate in South.
     If course, BJP chief J P Nadda, Amit Shah and Modi have been trying to enlarge NDA base by bringing in more smaller parties. Janasena founder and actor pawan kalyan,
Ram Vilas Paswan party and a host of others are being lured by NDA.
   Coalition politics is not a new phenomenon on the country’s political spectrum. The nation has witnessed it since 1970. The country has seen National Frnt, United Front, besides UPA & NDA.
    In the midst of these hectic political development, the JDS seemed to have been left in lurch. The devegowda party has not been part of UPA or NDA.