ಮೈಸೂರು, ಮೇ.೨೩,೨೦೨೫: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಪೀಠೋಪಕರಣ ಖರೀದಿ ಹಾಗೂ ಸಿಸಿ ಕ್ಯಾಮರಾ ಟೆಂಡರ್ ನಲ್ಲಿ ಭಾರಿ ಅವ್ಯವಹಾರ ನೆಡೆದಿದೆ. ಕುಲಪತಿ ಲೋಕನಾಥ್ ವಿರುದ್ಧ ಕೇಳಿ ಬಂದ ಆರೋಪ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿದ ವಕೀಲ ಕಾರ್ತಿಕ್ ಜಿ.ಎಸ್ ಹೇಳಿದಿಷ್ಟು.
ಮೈಸೂರು ವಿವಿಯ ಪೀಠೋಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಎಂಟು ವಿವಿಧ ಟೆಂಡರ್ ಗಳನ್ನು ಕರೆದಿದ್ದ ವಿವಿ, ಈ ಟೆಂಡರ್ ಗಳಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆಸಿದೆ. ಇಬ್ಬರು ವಿದ್ಯಾರ್ಥಿಗಳು ಕೂರುವ ಟೂ-ಸೀಟರ್ ಡೆಸ್ಕ್ ಗೆ ಕರೆದ ಟೆಂಡರ್ ನಲ್ಲಿ 4800 ರೂ. ಮೂಲ ಬೆಲೆಯ ಡೆಸ್ಕ್ ಗಳನ್ನು 28 ಸಾವಿರಕ್ಕೆ ಖರೀದಿ ಮಾಡಿದ್ದಾರೆ. ಇಂಟಿರಿಯರ್ಸ್ ಕಂಪನಿಯೊಂದು ಟು-ಸೀಟರ್ ಡೆಸ್ಕ್ ಗೆ ೪.೮೫೦ ರೂ. ಕೋಟ್ ಮಾಡಿತ್ತು. ಮತ್ತೊಂದು ಕಂಪನಿ ೨೮,೬೦೦ ರೂ. ಕೋಟ್ ಮಾಡಿತ್ತು. ವಿಪರ್ಯಾಸವೆಂದರೆ, ವಿವಿ ಕಡಿಮೆ ದರ ನಮೂದಿಸಿದ್ದ ಕಂಪನಿ ಕಡೆಗಣಿಸಿ ದುಬಾರಿ ದರ ನಮೂದಿಸಿದ್ದ ಕಂಪನಿಗೆ ಡಿಸ್ಕ್ ವಿತರಣೆ ಟೆಂಡರ್ ನೀಡಿರುವುದು ಅನುಮಾನಕ್ಕೆ ಎಡೆಮಾಡಿದೆ. ಒಟ್ಟು2.16 ಕೋಟಿ ರೂ ಟೆಂಡರ್ ಕರೆದಿದ್ದು, ಈ ಪೈಕಿ 70 ಲಕ್ಷ ರೂ. ಅವ್ಯವಹಾರ ನೆಡೆಸಿದ್ದಾರೆ ಎಂದು ವಕೀಲ ಕಾರ್ತಿಕ್ ಆರೋಪಿಸಿದರು.
ಈ ಅವ್ಯವಹಾರದ ಬಗ್ಗೆ ಈಗಾಗಲೆ ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಲಾಗಿದೆ. ದೂರು ನೀಡಿ ವಾರ ಕಳೆದರು ಲೋಕಾಯುಕ್ತ ಅಧಿಕಾರಿಗಳು ಎಫ್ ಐ ಆರ್ ದಾಖಲು ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಕಾರ್ತಿಕ್ ಆರೋಪಿಸಿದರು.
ಮೈಸೂರು ವಿವಿ ದೇಶದ ಪ್ರತಿಷ್ಠಿತ ವಿವಿ ಗಳಲ್ಲಿ ಒಂದು. ಸಿಎಂ ಸಿದ್ದರಾಮಯ್ಯ ಕೂಡ ಇದೆ ವಿವಿ ಯಲ್ಲಿ ವ್ಯಾಸಂಗ ಮಾಡಿದವರು. ಇಂತಹ ಭ್ರಷ್ಠರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಗೆ ವಕೀಲ ಕಾರ್ತಿಕ್ ಮನವಿ ಮಾಡಿದರು.
ಲೋಕಾಯುಕ್ತಕ್ಕೆ ಉತ್ತರ:
ಟೆಂಡರ್ ಅವ್ಯವಹಾರ ಆರೋಪದ ಬಗ್ಗೆ ಕುಲಪತಿ ಲೋಕನಾಥ್ ಅವರನ್ನು ಸಂಪರ್ಕಿಸಿದಾಗ, ಈ ಯಾವ ಆರೋಪದ ಬಗೆಗೂ ಪ್ರತಿಕ್ರಿಯೆ ನೀಡಲ್ಲ. ಲೋಕಾಯುಕ್ತರಿಗೆ ದೂರು ನೀಡಿದ್ದಾರೆ ಎಂಬುದು ತಿಳಿಯಿತು. ಲೋಕಾಯುಕ್ತರು ಸ್ಪಷ್ಟನೆ ಅಥವಾ ವಿವರಣೆ ಕೇಳಿದಲ್ಲಿ ಅವರಗೆ ಉತ್ತರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
KEY WORDS: UNIVERSITY OF MYSORE, UOM, Misconduct, tender, Lawyer Karthik, alleges
SUMMARY:
UNIVERSITY OF MYSORE: Misconduct in the tender: Lawyer Karthik alleges
There has been a significant irregularity in the purchase of equipment for the prestigious Mysore University and the CCTV camera tender. Allegations have been made against the UOM Vice Chancellor Loknath.