ಕೋವಿಡ್ ಮುನ್ನೆಚ್ಚರಿಕೆ ನಡುವೆ ಕೆ-ಸೆಟ್ ಪರೀಕ್ಷೆಗೆ ಮೈಸೂರು ವಿವಿ ಸಜ್ಜು

ಮೈಸೂರು, ಜುಲೈ 24, 2021 (www.justkannada.in): ಕೋವಿಡ್ ಮುನ್ನೆಚ್ಚರಿಕೆ ನಡುವೆ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ ನಡೆಸಲು ಮೈಸೂರು ವಿವಿ ಸಜ್ಜಾಗಿದೆ.

ಜುಲೈ 25ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾರ್ಥಿಗಳು ಪ್ರವೇಶ ಪತ್ರದ ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಹೆಸರು ನೋಂದಣಿ ಸಂಖ್ಯೆಯನ್ನು ನೋಡಲ್ ಕೇಂದ್ರದಲ್ಲಿ ನೀಡಿದರೆ, ಅವರ ದಾಖಲೆ ಹಾಗೂ ಹೆಸರನ್ನು ಪರಿಶೀಲಿಸಿ ನಕಲು ಪ್ರವೇಶ ಪತ್ರ ಕೊಡಲಾಗುತ್ತದೆ.

ವಿಶ್ವವಿದ್ಯಾಲಯ ಆಯೋಗ (ಯುಜಿಸಿ) ಸುಪರ್ದಿಯಲ್ಲಿ ನಡೆಯುವ ಈ ಪರೀಕ್ಷೆಗೆ ಮೈಸೂರು ವಿಶ್ವವಿದ್ಯಾಲಯವು ನೋಡಲ್ ಏಜೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 9 ಪರೀಕ್ಷೆ ನಡೆಸಲಾಗಿದೆ.

ಅಭ್ಯರ್ಥಿಗಳ ಸುರಕ್ಷತೆಯೇ ವಿವಿ ಆದ್ಯತೆ ನೀಡಿದ್ದು, ಕೋವಿಡ್ ಮಾರ್ಗಸೂಚಿ ಪಾಲಿಸಲು ಎಲ್ಲ ಕೇಂದ್ರಗಳಿಗೆ ಸೂಚಿಸಲಾಗಿದೆ. ಕೋವಿಡ್ ಲಸಿಕೆ ಪಡೆದಿರುವ ಸಿಬ್ಬಂದಿಯನ್ನೇ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

25ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ಪರೀಕ್ಷೆ ನಡೆಯಲಿದೆ. ಎಲ್ಲಾ ಅಭ್ಯರ್ಥಿಗಳು ಬೆಳಿಗ್ಗೆ, 8ಕ್ಕೆ ಪರೀಕ್ಷೆ ಕೇಂದ್ರದಲ್ಲಿ ಹಾಜರಿರಬೇಕು. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಮತ್ತು ಪ್ರವೇಶ ಪರೀಕ್ಷಾ ಕೇಂದ್ರಗಳಲ್ಲಿ ಪತ್ರವನ್ನು ತರಬೇಕು ಎಂದು ಕೆ-ಸೆಟ್ ಪ್ರತಿ ಸಂಯೋಜಕ ಪ್ರೊ.ಎಚ್.ರಾಜಶೇಖರ್ ಮಾಹಿತಿ ನೀಡಿದ್ದಾರೆ.