ಅವೈಜ್ಞಾನಿಕವಾಗಿರುವ ರಾಜ್ಯೋತ್ಸವ ಸಮಿತಿ ವಜಾಮಾಡಿ : ಸ.ಕ.ರ.ವೇದಿಕೆ ರಾಜ್ಯಾಧ್ಯಕ್ಷ ಅರವಿಂದ ಶರ್ಮಾ ಒತ್ತಾಯ 

ಮೈಸೂರು,ನವೆಂಬರ್,12,2020(www.justkannada.in) : ಅವೈಜ್ಞಾನಿಕವಾಗಿರುವ ರಾಜ್ಯೋತ್ಸವ ಸಮಿತಿ ಕೂಡಲೇ ವಜಾಮಾಡಿ ವೈಜ್ಞಾನಿಕವಾಗಿ ಜಿಲ್ಲಾ ರಾಜ್ಯೋತ್ಸವ ಅಯ್ಕೆ ಸಮಿತಿಯ ರಚನೆ ಮಾಡುವಂತೆ ಒತ್ತಾಯಿಸಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅರವಿಂದ ಶರ್ಮಾ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.kannada-journalist-media-fourth-estate-under-loss

ರಾಜ್ಯೋತ್ಸವ ಅಯ್ಕೆ ಸಮಿತಿ ಅವಧಿ ಮುಗಿದಿದೆ

ಜಿಲ್ಲಾ ರಾಜ್ಯೋತ್ಸವದ ಸಾಧಕರ ಅಯ್ಕೆಗೆ ಸಮಿತಿ ಇದ್ದು, ಪ್ರತೀ ಐದು ವರ್ಷಗಳಿಗೆ ಸದಸ್ಯರ ಬದಲಾವಣೆ ಕೂಡ ಮಾಡಬೇಕೆಂದಿದ್ದೆ. ಆದರೆ, ಮೈಸೂರು ಜಿಲ್ಲೆಯ ರಾಜ್ಯೋತ್ಸವ ಅಯ್ಕೆ ಸಮಿತಿಯ ಅವಧಿ ಐದು ವರ್ಷಗಳು ಮೀರಿದ್ದರಿಂದ ಹಾಗೂ ಈ ಸಮಿತಿಯ ರಚನೆ ಅವೈಜ್ಞಾನಿಕವಾಗಿ ಕೂಡಿದ್ದು, ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಮೈಸೂರಿನಲ್ಲಿ ರಾಜ್ಯೋತ್ಸವ ಅಯ್ಕೆ ಸಮಿತಿಯನ್ನು ಕೂಡಲೆ ಜಿಲ್ಲಾಡಳಿತ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಅಯ್ಕೆ ಸಮಿತಿಯಲ್ಲಿ ವಿವಿಧ ಕ್ಷೇತ್ರದ ನುರಿತರು ಇಲ್ಲ

ರಾಜ್ಯೋತ್ಸವದಲ್ಲಿ ಕನ್ನಡ ಹೋರಾಟಗಾರಿಗೆ, ವಿವಿಧ ಕ್ಷೇತ್ರದದಲ್ಲಿನ ಸಾಧಕರಿಗೆ ಸನ್ಮಾನಿಸುವರು. ಆದರೆ, ಈ ಅಯ್ಕೆ ಸಮಿತಿಯಲ್ಲಿ ವಿವಿಧ ಕ್ಷೇತ್ರದ ಬಗ್ಗೆ ನುರಿತರು ಇಲ್ಲವಾಗಿರುವುದು ದುರಂತ ಎಂದು ಬೇಸರವ್ಯಕ್ತಪಡಿಸಿದ್ದಾರೆ.

ಸಮಾಜಕ್ಕೆ ಏನೂ ಕೊಡುಗೆ ನೀಡದಿದ್ದರೂ ಲಾಭಿ ಮಾಡಿ ಅಯ್ಕೆ

ಸಾಹಿತ್ಯ ವಲಯದಿಂದ ಹಾಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ಅಯುಕ್ತರು ಇರುವುದು ಸರಿಯಷ್ಟೇ. ಆದರೆ, ಇನ್ನುಳಿದವರೆಲ್ಲಾ ಹೋರಾಟಗಾರರು ಪ್ರತೀ ಬಾರಿ ಅಯ್ಕೆ ಸಮಿತಿಯಲ್ಲಿ ಕೆಲವರಿಂದ ಗೊಂದಲ, ಗದ್ದಲ ಹಾಗೂ ಕೆಲವರು ತಮ್ಮ ಕಡೆಯವರೆಂದು ಅವರು ಸಮಾಜಕ್ಕೆ ಏನೂ ಕೊಡುಗೆ ನೀಡದಿದ್ದರೂ ಲಾಭಿ ಮಾಡಿ ಅವರನ್ನೇ ಅಯ್ಕೆ ಮಾಡುವುದು ಪ್ರತೀ ವರ್ಷ ನೆಡೆಯುತ್ತಿದೆ ಎಂದು ದೂರಿದ್ದಾರೆ.

ಇಂತಹ ಸದಸ್ಯರಿಂದ ಜಿಲ್ಲಾಡಳಿತಕ್ಕೆ ಮುಜುಗರ ಹಾಗೂ ಅವೈಜ್ಞಾನಿಕವಾಗಿದ್ದು, ಜಿಲ್ಲಾಡಳಿತಕ್ಕೆ ಅಯ್ಕೆ ಸಮಿತಿಯ ಕೆಲ ಸದಸ್ಯರು ತೋರುತ್ತಿರುವ ಅಗೌರವ ಎಂದರೆ ಉತ್ಪ್ರೇಕ್ಷೆ ಆಗಲಾರದು‌. ಹೀಗಾಗಿ, ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಕೆಲವರು ಸಾಧನೆ ಮಾಡದೇ ಇರುವವರು ರಾಜಕಾರಣಿಗಳಿಂದ ಶಿಫಾರಸು ಪತ್ರ ತೆಗೆದುಕೊಂಡು ಬರುವುದನ್ನು ನಿಜಕ್ಕೂ ಒಪ್ಪಬಾರದು ಇಂತಹ ಕೆಟ್ಟ ಸಂಪ್ರದಾಯಕ್ಕೆ ತಿಲಾಂಜಲಿ ಹಾಕಬೇಕು ಎಂದು ಹೇಳಿದ್ದಾರೆ.Unscrupulous-Rajyotsava-Committee-dismissed- Arvind Sharma-demands

ಒಂದೊಂದು ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವವರನ್ನು ಅಯ್ಕೆ ಸಮಿತಿಗೆ ನಿಯೋಜನೆ ಮಾಡಿ ಜಿಲ್ಲಾಡಳಿತ ಅದೇಶ ಹೊರಡಿಸಿ ಮುಂದಿ‌ನ ಭಾರಿಯ ರಾಜ್ಯೋತ್ಸವ ಸಾಧಕರಿಗೆ ಸಾಮಾಜಿಕ ಹಾಗೂ ನ್ಯಾಯ ಒದಗಿಸುವ ದೃಷ್ಟಿಯಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸಾಧಕರಿಗೆ ಗೌರವಿಸುವ ಕೆಲಸ ಮಾಡಬೇಕೆಂದು ವೇದಿಕೆ ಇಂದ ಒತ್ತಾಯ ಮಾಡುತ್ತಿದ್ದೇವೆ ಎಂದು ಮನವಿ ಪತ್ರವನ್ನ ಸಲ್ಲಿಸಿದ್ದಾರೆ.

ಈ ಸಂದರ್ಭ ಪರಿಸರ ಸಂರಕ್ಷಣಾ ಸಮಿತಿಯ ಭಾನುಮೋಹನ್ ಇದ್ದರು.

key words  : Unscrupulous-Rajyotsava-Committee-dismissed- Arvind Sharma-demands