ಮುರುಘಾ ಮಠದಲ್ಲಿ ಅಪರಿಚಿತ ಹೆಣ್ಣು ಮಗು ಪತ್ತೆ.

ಚಿತ್ರದುರ್ಗ,ಅಕ್ಟೋಬರ್,14,2022(www.justkannada.in):  ಅಪ್ರಾಪ್ತ ವಿದ್ಯಾರ್ಥಿನೀಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಮುರುಘಾ ಮಠದ  ಶಿವಮೂರ್ತಿ ಶ್ರೀಗಳು ನ್ಯಾಯಾಂಗ ಬಂಧನದಲ್ಲಿದ್ದು  ಜಾಮೀನು ಪಡೆಯಲು ಹೋರಾಟ ನಡೆಸುತ್ತಿರುವ ನಡುವೆಯೇ  ಮಠದ ಅವರಣದಲ್ಲಿರುವ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ.

ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣ  ದಾಖಲಾದ ಬಳಿಕ ವಸತಿ ಶಾಲೆಯಲ್ಲಿದ್ದ ಮಕ್ಕಳು ಶಿಫ್ಟ್‌ ಮಾಡಲಾಗಿತ್ತು. ಮಕ್ಕಳನ್ನು ಸರ್ಕಾರಿ ವಸತಿ ಶಾಲೆ, ಬಾಲ ಮಂದಿರಕ್ಕೆ ಶಿಫ್ಟ್‌ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ.

ಹೆಣ್ಣು ಮಗುವಿನ ಪೋಷಕರ ಬಗ್ಗೆ ವಿವರ ಲಭ್ಯವಿಲ್ಲ. ಪೋಷಕರ ಪತ್ತೆಗಾಗಿ ಮಕ್ಕಳ ರಕ್ಷಣಾ ಘಟಕ ಪತ್ರಿಕಾ ಜಾಹೀರಾತು ನೀಡಿದೆ.  ಮಠದ ಹಾಸ್ಟೆಲ್ ನಲ್ಲಿ ಅನಧಿಕೃತವಾಗಿ ಮಗು ಇರಿಸಿಕೊಂಡ ಆರೋಪ ಕೇಳಿಬಂದಿದ್ದು,  ಅದಲ್ಲದೆ, ಮಡಿಲು ಯೋಜನೆಗೆ ಮಗುವನ್ನು ಸೇರಿಸದ ಆರೋಪವನ್ನೂ ಮಾಡಲಾಗಿದೆ. ಈ ಸಂಬಂಧ ಮಕ್ಕಳ ಕಲ್ಯಾಣ ಸಮಿತಿ, ಜಿಲಾಡಳಿತಕ್ಕೆ ದೂರು ನೀಡಿ ತನಿಖೆಗೆ ಆಗ್ರಹಿಸಲಾಗಿದೆ.

Key words: Unknown -girl –child- found – Muruga Math