ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಗೂಗಲ್ ಕ್ಲೌಡ್ ಕೋರ್ಸ್ ಗೆ ಚಾಲನೆ.

ಮೈಸೂರು, ಜುಲೈ 26, 2021 (www.justkannada.in): ಮೈಸೂರು ವಿಶ್ವವಿದ್ಯಾನಿಲಯ ಇತ್ತೀಚೆಗೆ 100 ವರ್ಷಗಳನ್ನು ಪೂರೈಸಿ ಸಂಶೋಧನೆ ಹಾಗೂ ಶಿಕ್ಷಣದ ಉತ್ಕೃಷ್ಟತೆಯ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶಗಳ ಪ್ರವೃತ್ತಿ ಬದಲಾಗುತ್ತಿದೆ, ತಂತ್ರಜ್ಞಾನ ಹಾಗೂ ದತ್ತಾಂಶಗಳು ನಾವು ಪರಸ್ಪರ ಸಂಭಾಷಿಸುವುದು ಸೇರಿದಂತೆ ನಮ್ಮ ವಿಶ್ವವನ್ನು ಮರುವಿನ್ಯಾಸಗೊಳಿಸುತ್ತಿವೆ; ಈ ಮಾಹಿತಿ ವಿಸ್ಫೋಟ ಅಧ್ಯಯನ ಹಾಗೂ ಅನ್ವಯಿಸುವಿಕೆಯ ನಿಟ್ಟಿನಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ.jk

ಶೈಕ್ಷಣಿಕ ಉತ್ಕೃಷ್ಟತೆಯ ಬದ್ಧತೆ ಹಾಗೂ ವಿದ್ಯಾರ್ಥಿಗಳ ಕಲಿಕೆಯನ್ನು ವಿಶೇಷವನ್ನಾಗಿಸುವ ಬಲವಾದ ಇಚ್ಛೆಯೊಂದಿಗೆ ಮೈಸೂರು ವಿಶ್ವವಿದ್ಯಾಲಯದ ಹಾಲಿ ಉಪಕುಲಪತಿಗಳಾದ ಪ್ರೊ. ಜಿ. ಹೇಮಂತ್ ಕುಮಾರ್ ಅವರು ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಮೂಲಕ ವಿಶ್ವವಿದ್ಯಾಲಯವನ್ನು ಮುನ್ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಲಾಭಕ್ಕಾಗಿ ಗೂಗಲ್ ಕ್ಲೌಡ್ ಸಹಯೋಗದಲ್ಲಿ ಗೂಗಲ್ ಕ್ಲೌಡ್ ಕುರಿತು ಹೆಚ್ಚಿನ ಅಧ್ಯಯನ ಮಾಡಲು ‘ಗೂಗಲ್ ಕ್ಲೌಡ್ ಸೆಂಟರ್ ಆಫ್ ಎಕ್ಸ್ಲೆನ್ಸ್’ ಅನ್ನು ಸ್ಥಾಪಿಸಿದೆ. ಈ ಕೇಂದ್ರವು ‘ಗೂಗಲ್ ಕ್ಲೌಡ್ ಕೆರಿಯರ್ ರೆಡಿನೆಸ್’ ಹಾಗೂ ‘ಗೂಗಲ್ ಕ್ಲೌಡ್ ಕಂಪ್ಯೂಟಿಂಗ್ ಫೌಂಡೇಷನ್ಸ್’ ಎಂಬ ಎರಡು ಮುಂಚೂಣಿ ಕೋರ್ಸ್ ಗಳನ್ನು ಆರಂಭಿಸಲಿದೆ.

ಕ್ಲೌಡ್ ಇನ್ಫ್ಟಾಸ್ಟಕ್ಚರ್, ಅಪ್ಲಿಕೇಷನ್ ಡೆವೆಲಪ್ಮೆಂಟ್, ಬಿಗ್ ಡಾಟಾ, ಹಾಗೂ ಮಷಿನ್ ಲರ್ನಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ವ್ಯಾಪಾರ ಹಾಗೂ ತಾಂತ್ರಿಕ ಕ್ಲೌಡ್ ಉದ್ಯೋಗಾವಕಾಶಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಗೂಗಲ್ ಕ್ಲೌಡ್ ಕೆರಿಯರ್ ರೆಡಿನೆಸ್ ಕಾರ್ಯಕ್ರಮ ಈ ಕೆಳಕಂಡ ವಿಷಯಗಳನ್ನು ಕಲ್ಪಿಸಲಿದೆ:

•ಅಸೋಸಿಯೇಟ್ ಕ್ಲೌಡ್ ಇಂಜಿನಿಯರ್ ಟ್ರ್ಯಾಂಕ್: ಇದು ಕ್ಲೌಡ್ ಇನ್ಫ್ಟಾಸ್ಟಕ್ಚರ್,, ಕ್ಲೌಡ್ ನೇಟಿವ್ ಅಪ್ಲಿಕೇಷನ್ ಡೆವೆಲಪ್ಮೆಂಟ್, ಹಾಗೂ ಡಾಟಾ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಇಂಜಿನಿಯರಿಂಗ್ ಹಾಗೂ ನಿರ್ವಹಣಾ ಪಾತ್ರಗಳಿಗೆ ಸಂಬಂಧಪಟ್ಟ ಉದ್ಯೋಗಾವಕಾಶಗಳನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ.

•ಡಾಟಾ ಅನಲಿಸ್ಟ್ ಟ್ರ್ಯಾಂಕ್: ಇದು ಡಾಟಾ ಅನಲಿಸ್ಟಿಕ್ಸ್, ಬ್ಯುಸಿನೆಸ್ ಇಂಟೆಲಿಜೆನ್ಸ್ ಹಾಗೂ ಮ್ಯಾನೇಜ್ಮೆಂಟ್ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಅರಸಲು ಬಯಸುವ ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ.

ಗೂಗಲ್ ಕ್ಲೌಡ್ ಕಂಪ್ಯೂಟಿಂಗ್ ಫೌಂಡೇಷನ್ಸ್ ಪಠ್ಯಕ್ರಮವು ಕ್ಲೌಡ್ ತಂತ್ರಜ್ಞಾನದ ಕುರಿತು ವಿಸ್ತೃತವಾದ ಪರಿಚಯವನ್ನು ಒದಗಸುತ್ತದೆ.

Key words: University of Mysore- launches – Google Cloud

ENGLISH SUMMARY…

University of Mysore launches a Google Cloud

Centre of Excellence to Prepare Students for Cloud Careers

Mysru, July 25, 2021 (www.justkannada.in): The University of Mysore recently celebrated its centennial, marking 100 years of excellence in research and education. As we move forward, it is clearly visible that the global career landscape is changing, technology and data are reshaping our world and how we interact with one another; this explosion of information is opening new opportunities for study and application.

With his commitment to excellence in education and passion to make a difference to students’ learning, the current Vice Chancellor Prof G Hemanth Kumar has been leading transformative changes at the University. One such initiative is to transform the career support services provided to students; alumni of the University and its 220 affiliate colleges and to better equip them for jobs of the future or to start their own venture. As a step towards this, University of Mysore has entered into a strategic partnership with Google Cloud to give its students a head start A Google Cloud Centre of Excellence will be established in the University to provide students with access to technology and services to learn more about Google Cloud. This Centre of Excellence will run two flagship programs titled Google Cloud Career Readiness and Google Cloud Computing Foundations.

To prepare students for cloud careers in business and technical domains related to cloud infrastructure, application development, big data, and machine learning, the Google Cloud Career Readiness program offers the following tracks:

• Associate Cloud Engineer track: This track is ideal for students aspiring to launch careers in engineering and management roles related to cloud infrastructure, cloud-native application development, and data engineering.

• Data Analyst track: This track is ideal for students keen on pursuing careers in data analytics, business intelligence, and management.

The Google Cloud Computing Foundations curriculum introduces students to the breadth of cloud technology with concepts, hands-on labs, assessments, and a capstone project on topics ranging from cloud infrastructure, application development, big data, and machine learning