ಕೃಷಿ ವಿರೋಧಿ ಮಸೂದೆಗಳ ಜಾರಿಗೆ ಖಂಡನೆ: ಐಕ್ಯ ಹೋರಾಟ ಸಮಿತಿಯಿಂದ ಉಪವಾಸ ಸತ್ಯಾಗ್ರಹ..

ಮೈಸೂರು,ಸೆಪ್ಟೆಂಬರ್,02,2020(www.justkannada.in) : ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ವಿರೋಧಿ ಮಸೂದೆಗಳನ್ನು ವಿರೋಧಿಸಿ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ವತಿಯಿಂದ ಉಪವಾಸ ಸತ್ಯಾಗ್ರಹ ನಡೆಸಲಾಯಿತು.jk-logo-justkannada-logo

ನಗರದ ಗಾಂಧಿವೃತ್ತದಲ್ಲಿ ಶುಕ್ರವಾರ ಜಮಾವಣೆಗೊಂಡ ಪ್ರತಿಭಟನಕಾರರು ಸರಕಾರದ ವಿರುದ್ಧ ಕೃಷಿ ವಿರೋಧಿ ಮಸೂದೆಗಳ ಜಾರಿ ಖಂಡಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, ಕೇಂದ್ರ ಮತ್ತ ರಾಜ್ಯ ಬಿಜೆಪಿ ಸರ್ಕಾರಗಳು ರೈತ, ಕಾರ್ಮಿಕ, ಜನವಿರೋಧಿ ಮಸೂದೆಗಳನ್ನು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ತಂದು ಜನರ ಬದುಕನ್ನು ಕಿತ್ತುಕೊಳ್ಳುತ್ತಿವೆ ಎಂದು ಆಕ್ರೋಶವ್ಯಕ್ತಪಡಿಸಿದರು.

 

United-Nations-fighting-committee-opposes-anti-agricultural-bills

ಸರ್ಕಾರಗಳು ಕಾರ್ಪೋರೇಟರ್ ಕಂಪನಿಗಳ ಪರವಾದ ನೀತಿಗಳನ್ನು ರೂಪಿಸುತ್ತಿವೆ. ಈ ಮಸೂದೆಗಳ ವಿರುದ್ಧ ದೇಶಾದ್ಯಂತ ರೈತರು, ದಲಿತರು, ಕಾರ್ಮಿಕರು, ಜನಸಮೂಹ ಬೀದಿಗೆ ಇಳಿದಿದ್ದು, ಮುಂದುವರಿದ ಭಾಗವಾಗಿ ಗಾಂಧೀಜಿಯವರ ಜನ್ಮದಿನದಂದು ರಾಷ್ಟ್ರವ್ಯಾಪಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಹೇಳಿದರು.

ಸತ್ಯಾಗ್ರಹದಲ್ಲಿ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ದಸಂಸದ ಆಲಗೂಡು ಶಿವಕುಮಾರ್, ಮಲ್ಲಹಳ್ಳಿ ನಾರಾಯಣ್, ಕಲ್ಲಹಳ್ಳಿ ಕುಮಾರ್, ಮಂಜು, ಚಂದ್ರೇಗೌಡ ಚಂದ್ರಶೇಖರ್ ಮೇಟಿ, ಎನ್ ಪುನೀತ್ ಅನೇಕರು ಭಾಗವಹಿಸಿದ್ದರು.

key words : United-Nations-fighting-committee-opposes-anti-agricultural-bills