ದಸರಾ ಉದ್ಘಾಟಕರಿಗೆ ಮೊದಲು ಚಾಮುಂಡಿ ಬೆಟ್ಟದ ಇತಿಹಾಸ, ಸಂಪ್ರದಾಯ ತಿಳಿಸಿ- ಕೇಂದ್ರ ಸಚಿವ ವಿ.ಸೋಮಣ್ಣ

ಮೈಸೂರು,ಸೆಪ್ಟಂಬರ್,4,2025 (www.justkannada.in): ನಂಬಿಕೆಗೆ, ಭಕ್ತಿಗೆ, ಇತಿಹಾಸಕ್ಕೆ ಮತ್ತೊಂದು ಹೆಸರು ಚಾಮುಂಡಿ ಬೆಟ್ಟ. ದಸರಾ ಉದ್ಘಾಟಕರಿಗೆ ತಾಯಿ ಚಾಮುಂಡಿ ಬೆಟ್ಟದ ಇತಿಹಾಸ ಉತ್ಸವ, ಆರಾಧನೆ, ಶಿಷ್ಟಾಚಾರವನ್ನ ಸಂಪ್ರದಾಯವನ್ನು ಮೊದಲು ತಿಳಿಸಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ,  ಕ್ಷುಲಕ ರಾಜಕಾರಣ ಬಿಟ್ಟು ಜನರ ನೋವಿಗೆ ಸ್ಪಂದಿಸಿ. ಅತಿವೃಷ್ಠಿಯಿಂದ ಎಲ್ಲೆಡೆ ನಷ್ಟವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ತಮ್ಮ ಜಿಲ್ಲೆಗಳಿಗೆ ಕಳಿಸಿ ಎಂದರು.

ದಸರಾ ಉದ್ಘಾಟಕರಿಗೆ ತಾಯಿ ಚಾಮುಂಡಿಯ ಇತಿಹಾಸ ಉತ್ಸವ, ಆರಾಧನೆ, ಸಂಪ್ರದಾಯವನ್ನು ಮೊದಲು ತಿಳಿಸಿ. ಸಂಪ್ರದಾಯ ಅರಿತು ಅವರು ತಮ್ಮ ಕಾರ್ಯ ಮಾಡಲಿ. ದಸರಾ ಉದ್ಘಾಟಕರು ಈ ಸ್ಥಾನಕ್ಕೆ ಅರ್ಹರೋ ಅಥವಾ ಇಲ್ಲವೋ ಎಂಬ ಚರ್ಚೆ ಮಾಡಲ್ಲ. ನಮ್ಮ ಸಂಪ್ರದಾಯಕ್ಕೆ ಧಕ್ಕೆ ಆಗದಂತೆ ಉದ್ಘಾಟಕರು ನಡೆದುಕೊಳ್ಳಲಿ  ಎಂದು ವಿ.ಸೋಮಣ್ಣ ನುಡಿದರು.

ಎಡಪಂಥೀಯ ಮಾತಿಗೆ ಸರ್ಕಾರ ಬಲಿಯಾಗಬಾರದು

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಸುಳ್ಳನ್ನು ಸಾವಿರ ಬಾರಿ ಹೇಳಿದರೂ ಅದು ಸುಳ್ಳೇ ಎಂಬುದು ಧರ್ಮಸ್ಥಳ ವಿಚಾರದಲ್ಲಿ ಸಾಬೀತಾಗಿದೆ.  ಎಡಪಂಥೀಯರ ಮಾತಿಗೆ ಸರ್ಕಾರ ಬಲಿ ಆಗಬಾರದು. ಸರ್ಕಾರ ತಾನು ಮಾಡಿದ ತಪ್ಪನ್ನು ಈಗಲಾದರೂ ಅರಿತು ಕೊಳ್ಳಲಿ ಎಂದು ಹೇಳಿದರು.

Key words: Dasara inaugurators, history, traditions, Chamundi Hills, Union Minister, V. Somanna