ತುಮಕೂರಿಗೂ ನಮ್ಮ ಮೆಟ್ರೋ ವಿಸ್ತರಣೆ:  ಕೇಂದ್ರ ಸಚಿವ ವಿ.ಸೋಮಣ್ಣ

ತುಮಕೂರು,ಮೇ,17,2025 (www.justkannada.in): ತುಮಕೂರಿಗೂ ನಮ್ಮ ಮೆಟ್ರೋ ವಿಸ್ತರಣೆಯಾಗಲಿದೆ ಎಂದು  ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ,  ತುಮಕೂರಿಗೆ ನಮ್ಮ ಮೆಟ್ರೋ ವಿಸ್ತರಣೆಯಾಗಲಿದ್ದು ಬಿಎಂಆರ್ ಸಿಎಲ್ ಈಗಾಗಲೇ ವರದಿ ನೀಡಿದೆ.  ನಮ್ಮ ಅವಧಿಯಲ್ಲಿ ಕಾರ್ಯರೂಪಕ್ಕೆ ತರುವ ಕೆಲಸವಾಗುತ್ತದೆ. ತುಮಕೂರಿನ ಜನರಿಗೆ ಕೇಂದ್ರದ ಎಲ್ಲಾ ಸೌಲಭ್ಯ ಸಿಗಬೇಕು ಇನ್ನೊಂದು ತಿಂಗಳಲ್ಲಿ ತುಮಕೂರು ಜನರಿಗೆ ದೊಡ್ಡ ಸುದ್ದಿ ಕೊಡತ್ತೇವೆ  ಅದು ಇಡೀ ತುಮಕೂರು ಚಿತ್ರಣವನ್ನೇ ಬದಲಿಸುತ್ತೆ.  ತುಮಕೂರು ಬೆಂಗಳೂರಿನ 2ನೇ ನಗರವಾಗಿ ಬೆಳೆಯೋದು ಗ್ಯಾರಂಟಿ  ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಜೊತೆ ರಾಜಿ ಮಾಡಿಕೊಂಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಹಣದ ಬಗ್ಗೆ ಕೇಳಲ್ಲ. ಅಭಿವೃದ್ದಿ ಬಗ್ಗೆ ಮಾತ್ರ ಕೇಳುತ್ತಾರೆ ಹೀಗಾಗಿ ಸಿದ್ದರಾಮಯ್ಯ ಜೊತೆ ರಾಜಿ ಮಾಡಿಕೊಂಡಿದ್ದೇನೆ. ಎಂದು ವಿ.ಸೋಮಣ್ಣ ತಿಳಿಸಿದರು.

Key words: Namma metro , extended, Tumakuru , Union Minister V. Somanna