Friday, October 9, 2026

BDA Apartments

Increase in COVID cases: DC’s village stay program with held BDA JK_Adv BDA Adv
Home Front Page ಅಕ್ರಮ ವಲಸಿಗರಿಗೆ ಶಾಶ್ವತ ಪ್ರಮಾಣ ಪತ್ರ ನೀಡಲು ಮುಂದಾಗಿದ್ದಾರೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಅಕ್ರಮ ವಲಸಿಗರಿಗೆ ಶಾಶ್ವತ ಪ್ರಮಾಣ ಪತ್ರ ನೀಡಲು ಮುಂದಾಗಿದ್ದಾರೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು,ಜುಲೈ,10,2026 (www.justkannada.in): ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ‘ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರ (PRC) – 2026’ ನಿಯಮಾವಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅಕ್ರಮ ವಲಸಿಗರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಕಾಂಗ್ರೆಸ್ ಬಂದ ಮೇಲೆ ಹೊಸ ಕಾನೂನು ತಂದಿದ್ದಾರೆ.  1 ದೇಶ 1 ಪೌರತ್ವಕ್ಕೆ ವಿರುದ್ದವಾಗಿ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡಲು ಮುಂದಾಗಿದ್ದಾರೆ.   ಪೌರತ್ವ ನೀಡಲು ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಆಂತರಿಕ ಭದ್ರತೆ ಆಧಾರದಲ್ಲಿ ಇದನ್ನು ಕೇಂದ್ರ ನಿರ್ಧಾರ ಮಾಡುತ್ತೆ ಕರ್ನಾಟಕದಲ್ಲಿ ಪ್ರಮಾಣ ಪತ್ರ ನೀಡುವ ಸರ್ಕಾರದ ಷಡ್ಯಂತ್ರ ಏನು? ಎಂದು ಪ್ರಶ್ನಿಸಿದ್ದಾರೆ.ಅಕ್ರಮ ವಲಸಿಗರಿಗೆ ಶಾಶ್ವತ ಪ್ರಮಾಣ ಪತ್ರ ನೀಡಲು ಮುಂದಾಗಿದ್ದಾರೆ- ಕೇಂದ್ರ ಸಚ...

ರಾಜ್ಯದಲ್ಲಿ ಎಸ್ ಐಆರ್ ಹಳ್ಳ ಹಿಡಿಸುವ ಪ್ರಯತ್ನ ನಡೆಸಿದ್ದಾರೆ ಅಕ್ರಮ ವಲಸಿಗರಿಗೆ ನಿವಾಸ ಪ್ರಮಣ ಪತ್ರ ನೀಡಲು ಹೊರಟಿದ್ದಾರೆ.  ಎರಡು ದಿನಗಳ ಹಿಂದೆ ಇದಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.  ಇದು ದೇಶದ ಆಂತರಿಕೆ ಭದ್ರತೆಗೆ ಸವಾಲು  ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.ಅಕ್ರಮ ವಲಸಿಗರಿಗೆ ಶಾಶ್ವತ ಪ್ರಮಾಣ ಪತ್ರ ನೀಡಲು ಮುಂದಾಗಿದ್ದಾರೆ jk02_new jk02 new

Key words: Union Minister, Shobha Karandlaje, illegal, immigrants