Wednesday, August 12, 2026

BDA Apartments

Home Front Page ತೈಲದ ವಿಚಾರದಲ್ಲಿ ನಮ್ಮ ದೇಶ ಆತ್ಮ ನಿರ್ಭರ ಅಲ್ಲ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ತೈಲದ ವಿಚಾರದಲ್ಲಿ ನಮ್ಮ ದೇಶ ಆತ್ಮ ನಿರ್ಭರ ಅಲ್ಲ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು,ಮೇ,11,2026 (www.justkannada.in):  ಇಂಧನ ಬಳಕೆ ಕಡಿಮೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕಳೆದ 10 ವರ್ಷಗಳಿಂದ ಬೇರೆ ಬೇರೆ ವಿಚಾರಗಳನ್ನು ಹೇಳುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಯೋಗ ಮಾಡಲು ಮೋದಿ ಹೇಳಿದರು.  2 ವರ್ಷದಿಂದ ಎಣ್ಣೆ ಬಳಕೆ ಕಡಿಮೆ ಮಾಡಿ ಅಂತಾ ಹೇಳುತ್ತಿದ್ದಾರೆ.  ತೈಲದ ವಿಚಾರದಲ್ಲಿ ನಮ್ಮ ದೇಶ ಆತ್ಮ ನಿರ್ಭರ ಅಲ್ಲ. ಹೊರ ದೇಶದಿಂದ ಶೇ 70ರಷ್ಟು ಖಾದ್ಯ ತೈಲ ತರಿಕೊಳ್ಳುತ್ತಿದ್ದೇವೆ . ತೈಲ ಒಂದು ಕಡಿಮೆ ಆದರೆ ವಿದೇಶಿ ವಿನಿಮಯ ಕಡಿಮೆ ಆಗುತ್ತೆ ಎಂದರು.

ಪೆಟ್ರೋಲ್ ಉತ್ಪನ್ನ ವಾಹನ, ರಸಗೊಬ್ಬರ ಉಪಯೋಗ ಆಗುತ್ತದೆ. ತೈಲ ಉತ್ಪನ್ನ ಕಡಿಮ ಮಾಡಿದರೆ ವಿದೇಶಿ ವಿನಿಮಯ ಕಡಿಮೆ ಮಾಡಬಹುದು. ಪೆಟ್ರೋಲಿಯಂ ಉತ್ಪನ್ನಗಳಲ್ಲಿ ನಾವು ಆತ್ಮ ನಿರ್ಭರ ಅಲ್ಲ ಎಂದು  ಶೋಭಾ ಕರಂದ್ಲಾಜೆ ತಿಳಿಸಿದರು.

Key words:  country, oil, Use, PM Modi, Union Minister, Shobha Karandlaje