ಚಿಕ್ಕಮಗಳೂರು,ಡಿಸೆಂಬರ್,20,2025 (www.justkannada.in): ಸಿಎಂ ಕುರ್ಚಿ ಕದನದಿಂದ ರಾಜ್ಯದಲ್ಲಿ ಅಸ್ಥಿರ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ನಲ್ಲಿ ಹೈ ಇದೆ, ಕಮಾಂಡ್ ಅನ್ನೋದು ಉಳಿದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಸಿದ್ದರಾಮಯ್ಯ ಒಪ್ಪಂದ ಆಗಿಲ್ಲ ಅಂತಾರೆ. ಡಿಕೆ ಶಿವಕುಮಾರ್ ಒಪ್ಪಂದ ಆಗಿದೆ ಅಂತಾರೆ. ಕುರ್ಚಿ ಕದನದಿಂದ ರಾಜ್ಯದಲ್ಲಿ ಅಸ್ಥಿರ ವಾತಾವರಣ ನಿರ್ಮಾಣವಾಗಿದೆ. ಗೊಂದಲಮಯ ಪರಿಸ್ತಿತಿಯಿಂದ ಅಭಿವೃದ್ದಿ ಕುಂಠಿತವಾಗಿದೆ. ಸರ್ಕಾರ ತನ್ನ ಕೆಲಸವನ್ನ ಸರಿಯಾಗಿ ಮಾಡಬೇಕು. ಕಾಂಗ್ರೆಸ್ ನಲ್ಲಿ ಹೈ ಇದೆ ಕಮಾಂಡ್ ಅನ್ನೋದು ಉಳಿದಿಲ್ಲ. ಇದನ್ನ ಸೆಟಲ್ ಮೆಂಟ್ ಮಾಡೋಕೆ ಯಾಕೆ ಆಗುತ್ತಿಲ್ಲ ಹೈಕಮಾಂಡ್ ಗೆ ಕಂಟ್ರೋಲ್ ಮಾಡಲು ಏನು ಉಳಿದಿಲ್ಲ ಎಂದು ಲೇವಡಿ ಮಾಡಿದರು.
ದ್ವೇಷ ಭಾಷಣ ಮಸೂದೆ ಬಗ್ಗೆ ಯಾವುದೇ ಚರ್ಚೆ ಅಗದೆ ಅಂಗೀಕಾರ ಮಾಡಿದ್ದಾರೆ. ಏನೇ ಮಾತನಾಡಿದರೂ ಜೈಲಿಗೆ ಹಾಕುತ್ತಾರೆ. ನನ್ನ ಪ್ರಕಾರ ಇದು ಅನುಷ್ಟಾನವಾಗಲ್ಲ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
Key words: Congress, high command, Union Minister, Pralhad Joshi







