ರಾಹುಲ್ ಗಾಂಧಿ ಮೆಚ್ಚಿಸಲು ಸಮೀಕ್ಷೆ: ನೈಜ ಸಮಸ್ಯೆ ಮರೆಮಾಚುವ ಕೆಲಸ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ,ಸೆಪ್ಟಂಬರ್,26,2025 (www.justkannada.in):  ರಾಜ್ಯದಲ್ಲಿ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ನಡೆಸುತ್ತಿರುವ ಸರ್ಕಾರದ ಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಮೀಕ್ಷೆ ಹೆಸರಲ್ಲಿ ನೈಜ ಸಮಸ್ಯೆ ಮರೆಮಾಚುವ ಕೆಲಸ ಮಾಡುತ್ತಿದೆ.  ರಾಜ್ಯದಲ್ಲಿ ಅಭಿವೃದ್ದಿ ಕೆಲಸವಾಗುತ್ತಿಲ್ಲ. ರಸ್ತೆಗುಂಡಿಗಳನ್ನ ಮುಚ್ಚಲು ಸರ್ಕಾರದ ಬಳಿ ಹಣವಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಕಿಡಿಕಾರಿದರು.

ಸಮೀಕ್ಷೆ ಮಾಡುವವರಿಗೆ ಯಾವುದೇ ತರಬೇತಿ ಕೊಟ್ಟಿಲ್ಲ. ಈಗಾಗಲೇ  ಸಮೀಕ್ಷೆ ಮಾಡಿ ನೀಡಿದ್ದ ವರದಿ ಮೂಲೆಗೆಸೆದಿದ್ದಾರೆ. ಈ ಹಿಂದೆ ಸರ್ವೇಗೆ 175 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇದೀಗ  ರಾಹುಲ್ ಗಾಂಧಿ, ಹೈಕಮಾಂಡ್ ಮೆಚ್ಚಿಸಲು ಈ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

Key words: Social Educational Economic Survey, Union Minister,  Prahlad Joshi