ಹುಬ್ಬಳ್ಳಿ,ಆಗಸ್ಟ್,16,2025 (www.justkannada.in): ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರನ್ನ ಬಂಧಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹಿಂದೂ ಭಾವನೆಗಳ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಸರ್ಕಾರದಲ್ಲಿರುವವರಿಂದಲೇ ಷಡ್ಯಂತ್ರ ನಡೆದಿದೆ. ಎಡಪಂಥೀಯ ವ್ಯಕ್ತಿಗಳಿಂದ ಷಡ್ಯಂತ್ರ ನಡೆದಿದೆ. ಈ ವಿಚಾರದಲ್ಲಿ ಡಿಕೆ ಶಿವಕುಮಾರ್ ಅಸಹಾಯಕರಾಗಿದ್ದಾರೆ ಎಂದರು.
13 ಸ್ಥಳ ಹೋಗಿ 16 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ . ಅಧಿವೇಶನದಲ್ಲಿಯೇ ಎಸ್ ಐಟಿ ವರದಿ ಮಂಡಿಸಬೇಕು ದೂರುದಾರರನ್ನ ಬಂಧಿಸಬೇಕು. ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ ಯಾಕೆ ಎಸ್ ಐಟಿ ರಚಿಸಲಿಲ್ಲ. ಮತ ಬ್ಯಾಂಕ್ ರಾಜಕೀಯಕ್ಕೆ ಇದು ಉದಾಹರಣೆ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು.
Key words: Darmasthala case, Arrest, complainants, Union Minister, Prahlad Joshi