ರಾಹುಲ್ ಗಾಂಧಿ ದುರಹಂಕಾರದಿಂದ ರಾಜಣ್ಣ ಸಂಪುಟದಿಂದ ವಜಾ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನವದೆಹಲಿ,ಆಗಸ್ಟ್,12,2025 (www.justkannada.in): ರಾಹುಲ್ ಗಾಂಧಿ ದುರಹಂಕಾರದಿಂದ ರಾಜಣ್ಣರನ್ನು  ಸಂಪುಟದಿಂದ ಹೊರ ಹಾಕಲಾಗಿದೆ ಎಂದು  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿ ಕೆಎನ್ ರಾಜಣ್ಣ ವಜಾ ಖಂಡಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜಣ್ಣ ಸತ್ಯ ಹೇಳಿದ್ದಕ್ಕೆ ಈ ಶಿಕ್ಷೆಯಾಗಿದೆ. ಸಿದ್ದರಾಮಯ್ಯ ಸಂಪುಟದಿಂದ ರಾಜಣ್ಣರನ್ನ ಹೊರದಬ್ಬಲಾಗಿದೆ. ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕೆಂದು ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಚುನಾವಣೆ ತಯಾರಿ ವೇಳೆ ಕಾಂಗ್ರೆಸ್ ಸರ್ಕಾರವೇ ಇತ್ತು.  ಲೋಕಸಭೆ ಚುನಾವಣೆ ತಯಾರಿ ನಡೆದಾಗಲೂ ಕಾಂಗ್ರೆಸ್ ಇತ್ತು.  ಅಯಾ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಗಳಾಗಿರುತ್ತಾರೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲಿಲ್ಲ ಅಂದರೆ ಪರಿಶೀಲನೆ ಮಾಡಬೇಕಿತ್ತು ಎಂದು ರಾಜಣ್ಣ ಹೇಳಿದ್ದಾರೆ . ಮೊದಲು ಕೆಎನ್ ರಾಜಣ್ಣರವರ ರಾಜೀನಾಮೆ ಕೇಳಬೇಕಿತ್ತು.  ಬಳಿಕ ರಾಜೀನಾಮೆ ಪಡೆಯದೇ ನೇರವಾಗಿ ಹೊರ ಹಾಕಿದ್ದಾರೆ. ದುರಹಂಕಾರದಿಂದ ರಾಹುಲ್ ಗಾಂಧಿ ಸಂಪುಟದಿಂದ ಹೊರಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: Rahul Gandhi,  arrogance, Rajanna , Cabinet, Union Minister, Prahlad Joshi