ಈವರೆಗೆ ಇರಾನ್ ನಿಂದ 67 ಸಾವಿರ ಭಾರತೀಯರನ್ನ ಕರೆ ತಂದಿದ್ದೇವೆ –ಕೇಂದ್ರ ಸಚಿವ ಜೈ ಶಂಕರ್

ನವದೆಹಲಿ,ಮಾರ್ಚ್,9,2026 (www.justkannada.in):  ಇರಾನ್ –ಇಸ್ರೇಲ್ ಯುದ್ದ ಹಿನ್ನೆಲೆಯಲ್ಲಿ ಇರಾನ್ ನಲ್ಲಿ ಸಿಲುಕಿದ್ದ 67 ಸಾವಿರ ಭಾರತೀಯರನ್ನ ಕರೆ ತಂದಿದ್ದೇವೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದರು.

ರಾಜ್ಯ ಸಭೆ ಕಲಾಪದಲ್ಲಿ ಇಂದು ಮಾತನಾಡಿ ಮಾಹಿತಿ ನೀಡಿದ ವಿದೇಶಾಂಗ ಸಚಿವ ಜೈಶಂಕರ್, ಮಧ್ಯ ಪ್ರಾಚ್ಯದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಸಿದ್ದ . ಅಲ್ಲಿ ಸಿಲುಕಿರುವ ಭಾರತೀಯರಿಗೆ ಸಲಹೆ ಸೂಚನೆ ನೀಡಲಾಗುತ್ತಿದೆ ಸುರಕ್ಷಿತ ಪ್ರದೇಶಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದೆ  ಯುದ್ದ ಪರಿಸ್ಥಿತಿ ಅರಿತು ಮೊದಲೇ ಸೂಚನೆ ಕೊಡಲಾಗಿದೆ. ಸಹಾಯವಾಣಿ ಕೂಡ ಬಿಡುಗಡೆ ಮಾಡಿದ್ದೇವೆ ಎಂದರು.

ಟೆಹ್ರಾನ್ ರಾಯಭಾರ ಕಚೇರಿ ಸುಸ್ಥಿತಿಯಲ್ಲಿದೆ. ಅರಬ್ ರಾಷ್ಟ್ರಗಳಲ್ಲಿರುವ ಭಾರತೀಯರಿಗೂ ಸಲಹೆ ಸೂಚನ ನೀಡಲಾಗಿದೆ  ಕತಾರ್, ಅರಬ್ ಅಧ್ಯಕ್ಷರ ಜೊತೆ ಮೋದಿ ಮಾತನಾಡಿದ್ದಾರೆ ಬಹ್ರೇನ್ ಯುಎಇ ಅಧ್ಯಕ್ಷರಿಗೆ ಕರೆ ಮಾಡಿ ಮಾತನಾಡಿದ್ದಾರೆ ಮಧ್ಯಪ್ರಾಚ್ಯದ ಎಲ್ಲ ದೇಶಗಳಲ್ಲಿರುವ ಭಾರತೀಯರ ರಕ್ಷಣೆ ಮುಖ್ಯ ಭಾರತೀಯರನ್ನ ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಮಾಡಲಾಗಿದೆ ಶಾಂತಿ ಕಾಪಾಡುವವರ ಪರ ಭಾರತ ಇದೆ ಎಂದು ಜೈಶಂಕರ್ ತಿಳಿಸಿದರು.

Key words: Iran, Israel war, 67,000 Indians,  Union Minister Jaishankar