ಬೆಂಗಳೂರು,ಜೂನ್,17,2026 (www.justkannada.in): ಬಿಡದಿ ಟೌನ್ ಶಿಪ್ ಮಾಡಲೇಬೇಕು ಅಂತಿದ್ದರೇ ನಾನು 2ನೇ ಬಾರಿ ಸಿಎಂ ಆಗಿದ್ದಾಗ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ನನ್ನ ಅವಧಿಯಲ್ಲಿ ಟೌನ್ ಶಿಪ್ ಮಾಡಲು ಹೊರಟಿದ್ದು ನಿಜ. ಮಾಡಲೇಬೇಕು ಅಂತಿದ್ದರೆ 2ನೇ ಬಾರಿ ಸಿಎಂ ಆಗಿದ್ದಾಗ ಮಾಡುತ್ತಿದ್ದೆ . ನಾನು 2ನೇ ಬಾರಿ ಸಿಎಂ ಆದಾಗ ಏಕೆ ಟೌನ್ ಶಿಪ್ ಮಾಡಲಿಲ್ಲ. ದುಡ್ಡು ಹೊಡೆಯಲು ಭೂಮಿ ಲಪಟಾಯಿಸಲು ನನ್ನ ಹೆಸರು ಬಳಕೆ. ಉದ್ದೇಶ ಒಳ್ಳೆಯದೇ ಆಗಿದ್ದರೆ ಬೆಂಬಲ ಕೊಡೋಣ. ಇಂತಹ ವ್ಯಕ್ತಿ ಬಗ್ಗೆ ನಾನು ಎಷ್ಟು ಸಾರಿ ಮಾತಾಡಲಿ ಎಂದು ಸಿಎಂ ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದರು.
ತಮ್ಮ ಆಸ್ತಿ ಬಗ್ಗೆ ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿ, ನಾನು ಅವರಿಗೆಲ್ಲಾ ಉತ್ತರ ಕೊಡಲ್ಲ. ಚಲುವರಾಯಸ್ವಾಮಿಗೆ ನಮ್ಮ ಕಾರ್ಯಕರ್ತರು ಉತ್ತರ ಕೊಡುತ್ತಾರೆ. ಅವರು ಎಲ್ಲಿ ಇದ್ದವರು ಅಂತವರ ಬಗ್ಗೆ ಚರ್ಚೆ ಮಾಡೋದು ಅನಾವಶ್ಯಕ. ಪಾಪ ಚಲುವರಾಯಸ್ವಾಮಿಗೆ ಕುರ್ಚಿ ಉಳಿಸಿಕೊಳ್ಳಲು ಓಡಾಡುತ್ತಿದ್ದಾರೆ ಅದಕ್ಕೆ ಏನೇನೋ ಮಾತನಾಡುತ್ತಾರೆ ಎಂದು ಹೆಚ್ ಡಿಕೆ ವ್ಯಂಗ್ಯವಾಡಿದರು.
Key words: townships, second time, CM , Union Minister, HDK







