ಮಂಡ್ಯ,ಮಾರ್ಚ್,14,2026 (www.justkannada.in): ಮಂಡ್ಯ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ನಾನು ಕೊಟ್ಟ ಮಾತಿನಂತೆ ನುಡಿದಂತೆ ನಡೆಯುತ್ತಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಹೆಚ್ ಡಿಕೆ, ಮಂಡ್ಯ ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅದರಂತೆ ನುಡಿದಂತೆ ನಡೆಯುತ್ತಿದ್ದೇನೆ. ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಜನತೆಯ ಆಶೀರ್ವಾದ, ಭಗವಂತನ ಕೃಪೆಯಿಂದ ಅವಕಾಶ ಸಿಕ್ಕಿದಾಗಲೆಲ್ಲ ಜಿಲ್ಲೆ ಮತ್ತು ರಾಜ್ಯದ ಜನತೆಯ ಸೇವೆಯನ್ನು ನಿಷ್ಠೆಯಿಂದ ಮಾಡಿದ್ದೇನೆ.
ಗೌರವಾನ್ವಿತ ಪ್ರಧಾನಿಗಳಾದ ನರೆಂದ್ರ ಮೋದಿ ಅವರ ಮಾರ್ಗದರ್ಶನ, ದೂರದೃಷ್ಟಿಯೊಂದಿಗೆ ಸಿಎಸ್ ಆರ್ ನಿಧಿ ಮೂಲಕ ಮಂಡ್ಯ ಜಿಲ್ಲೆಯ ಜನರ ಉನ್ನತಿಗೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಆರೋಗ್ಯ, ಶಿಕ್ಷಣ, ನೈರ್ಮಲ್ಯ, ಮೂಲಸೌಕರ್ಯ ಹಾಗೂ ವಿಕಲಚೇತನರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ ಎಂದು ಕೇಂದ್ರ ಸಚಿವ ಹೆಚ್ ಡಿಕೆ ತಿಳಿಸಿದ್ದಾರೆ.
ಈ ದಿನ 388 ವಿಕಲಚೇತನ ಬಂಧುಗಳಿಗೆ Tvs ಕಂಪನಿಯ ನಾಲ್ಕು ಚಕ್ರದ ವಾಹನಗಳನ್ನು ಹಸ್ತಾಂತರ ಮಾಡಲಾಗುತ್ತಿದೆ. ಹಾಗೆಯೇ, ಸರಕಾರಿ ಶಾಲೆ ಕಾಲೇಜುಗಳಿಗೆ 100 ಲ್ಯಾಪ್ ಟಾಪ್, 500 ಕಂಪ್ಯೂಟರ್ ಗಳನ್ನು ಕೊಡಲಾಗುವುದು ಹಾಗೂ ಮಂಡ್ಯದ ವಿಮ್ಸ್ ಸಂಸ್ಥೆಗೆ ಸುಸಜ್ಜಿತ ಆಂಬುಲೆನ್ಸ್ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
Key words: Development, Mandya district, Union Minister, HDK







