ತುಮಕೂರು,ಫೆಬ್ರವರಿ,16,2026 (www.justkannada.in): ನಾನು ರಾಜ್ಯದಲ್ಲಿ ಎರಡು ಬಾರಿ ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದೆ. ಆದರೆ ನಾನು ಕೊಟ್ಟ ಯೋಜನೆಗಳಿಗೆ ಎಂದೂ ಜಾಹೀರಾತು ನೀಡಿರಲಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಈ ನಾಡಿನ 6 ಕೋಟಿ ಜನರು ಆಶೀರ್ವಾದ ಮಾಡಿ ಸಿಎಂ ಆಗಿಲ್ಲ. ದೈವ ಪ್ರೇರಣೆ ಗುರು ಹಿರಿಯರ ಆಶೀರ್ವಾದದಿಂದ ಸಿಎಂ ಆಗಿದ್ದೆ. ಜೊತೆಗ ನಮ್ಮ ಪಕ್ಷದಲ್ಲಿ ಗೆದ್ದ ಶಾಸಕರಿಂದ ಸಿಎಂ ಆಗಿದ್ದೆ. ರಾಜ್ಯದಲ್ಲಿ ನಾನು 2 ಬಾರಿ ಸಿಎಂ ಆಗಿದ್ದೆ ನಾನು ಕೊಟ್ಟಿರುವ ಯೋಜನೆಗಳಿಗೆ ಎಂದೂ ಜಾಹೀರಾತು ನೀಡಿಲ್ಲ. ಜನಾಮಾನ್ಯರಿಗೆ ಹತ್ತಿರವಾಗಿ ಕೆಲಸ ಮಾಡಿದ್ದೇನೆ ಎಂದರು.
ಈ ಹಿಂದೆ ಹಲವು ಬಾರಿ ಚಿಕ್ಕನಾಯಕನಹಳ್ಳಿಗೆ ಭೇಟಿ ನೀಡಿದ್ದೇನೆ. 2018ರಲ್ಲಿ ಗ್ರಾಮ ವಾಸ್ತವ್ಯಕ್ಕೆ ತಿಮ್ಮನಹಳ್ಳಿಗೆ ಭೇಟಿ ನೀಡಿದ್ದೆ. ಸಭೆ ಮಾಡುವ ತಯಾರಿ ನಡೆಸಿದ್ದರು. ಅದೆಲ್ಲವೂ ಮರೆಯಲು ಸಾಧ್ಯವಿಲ್ಲ ಎಂದು ಹೆಚ್ ಡಿಕೆ ಸ್ಮರಿಸಿದರು.
Key words: CM, accidental CM, Union Minister, HDK







