ನವದೆಹಲಿ,ನವೆಂಬರ್,11,2025 (www.justkannada.in): ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಬಿಜೆಪಿ, ಜೆಡಿಯು ನೇತೃತ್ವದ ಎನ್ ಡಿಎ 203 ಕ್ಷೇತ್ರಗಳಲ್ಲಿ ಗೆಲುವಿನತ್ತ ದಾಪುಗಾಲಿಟ್ಟರೇ ಕಾಂಗ್ರೆಸ್, ಆರ್ ಜೆಡಿ ನೇತೃತ್ವದ ಮಹಾಘಟಬಂದನ್ 34 ಸ್ಥಾನ ಪಡೆದು ತೀವ್ರ ಮುಖಭಂಗ ಅನುಭವಿಸಿದೆ.
ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಕರ್ನಾಟಕದಲ್ಲಿಯೂ ಮುಂದೆ ಇದೇ ರೀತಿ ಫಲಿತಾಂಶ ಹೊರಬೀಳಲಿದೆ ಬಿಹಾರ ಚುನಾವಣೆಯ ಫಲಿತಾಂಶದ ರೀತಿ . 2028ರಲ್ಲಿ ರಾಜ್ಯದಲ್ಲಿ ಮರುಕಳಿಸಲಿದೆ. ಬಿಜೆಪಿ-ಜೆಡೆಸ್ ಮೈತ್ರಿ ಮುಂದಿನ ಗೆಲುವಿಗೆ ಬುನಾದಿ ಹಾಕಿದೆ ಎಂದು ಹೇಳಿದರು.
ಬಿಹಾರದಲ್ಲಿ ಎನ್ ಡಿಎಗೆ ಸಿಕ್ಕ ಗೆಲುವು ಬಿಜೆಪಿಯಲ್ಲಿ ಉತ್ಸಾಹ ಹೆಚ್ಚಿಸಿದೆ. ಕರ್ನಾಟಕದಲ್ಲಿಯೂ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇದು ಪೂರಕವಾಗಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾದರೂ ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಅಭಿವೃದ್ಧಿ ಬಗ್ಗೆ ನಿರ್ಲಕ್ಷವಹಿಸುತ್ತಿರುವುದು ರಾಜ್ಯದ ಜನತೆಗೂ ಅರ್ಥವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೆಚ್ ಡಿಕೆ ತಿಳಿಸಿದರು.
Key words: Bihar, Election, results, Karnataka, next elections, Union Minister, HDK







