ಬೆಂಗಳೂರು,ನವೆಂಬರ್,14,2025 (www.justkannada.in): ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಇದು ಹೊಸದಾಗಿ ಏನು ನಡೆಯುತ್ತಿಲ್ಲ. ಈ ಹಿಂದೆ ಅಧಿಕಾರಿಗಳ ವಿಚಾರದಲ್ಲಿ ಘರ್ಷಣೆಯಾಗಿದೆ. ಅಧಿಕಾರಿಗಳ ನಡುವೆಯೇ ರಾಜಕಾರಣ ನಡೆಯುತ್ತಿದೆ. ವಿಧಾನಸೌಧದಲ್ಲೇ ಟೆರರಿಸ್ಟ್ ಇದ್ದಾರೆ. ಟೆರರಿಸ್ಟ್ ಯಾರೆಂದು ನನಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ. ಅದು ಜನರಿಗೂ ಕೂಡ ಗೊತ್ತಿದೆ ವಿಧಾನಸೌಧದಲ್ಲಿರೋ ಟೆರರಿಸ್ಟ್ ಇವರಿಗಿಂತ ತುಂಬಾ ಡೇಂಜರ್ ಎಂದು ಹೊಸಬಾಂಬ್ ಸಿಡಿಸಿದರು.
ನಾವು ಜೈಲಿನಲ್ಲಿರೂ ಟೆರರಿಸ್ಟ್ ಗಳ ಬಗ್ಗೆ ಮಾತನಾಡುತ್ತೇವೆ. ಅಧಿಕಾರಿಗಳ ನಡುವೆಯೇ ರಾಜಕಾರಣ ನಡೆಯುತ್ತಿದೆ ಗೃಹ ಸಚಿವರು ತನಿಖೆ ಮಾಡುತ್ತೇವೆ ಎನ್ನುತ್ತಾರೆ. ಈಗ ತನಿಖೆ ಮಾಡಿ ಏನ್ ಮಾಡುತ್ತೀರಾ? ಇವೆಲ್ಲವನ್ನೂ ಸಿಎಂ ಗೃಹಸಚಿವರನ್ನೇ ಕೇಳಬೇಕು. ಆಡಳಿತ ವೈಪಲ್ಯ ಸರ್ಕಾರದಲ್ಲಿ ಎದ್ದು ಕಾಣುತ್ತಿದೆ. ಸಿಎಂ ಸಿದ್ದರಾಮಯ್ಯ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದ್ರು. ಈಗ ನಿಮಗೆ ಮಾನ ಮರ್ಯಾದೆ ಇದೆಯಾ? ಎಂದು ಹೆಚ್.ಡಿಕೆ ಕಿಡಿಕಾರಿದರು.
Key words: terrorists, Vidhan soudha, Union Minister, HDK







