ಮೈಸೂರು,ಜುಲೈ,5,2025 (www.justkannada.in): ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ ಎಸ್ ಎಸ್ ಬ್ಯಾನ್ ಖಚಿತ ಎಂದು ಹೇಳಿಕೆ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಆರ್ ಎಸ್ಎಸ್ ವಿಚಾರ ಇರಲಿ ಬಿಡಿ 40 ವರ್ಷದಿಂದ ಏನು ಸಾಧನೆ ಮಾಡಿದ್ದಿರಿ. ಕಲ್ಯಾಣ ಕರ್ನಾಟದಲ್ಲಿ ಏನು ಸಾಧನೆ ಆಗಿದೆ. ಆರ್ ಎಸ್ ಎಸ್ ಬಂದ್ ಮಾಡುವುದಿರಲಿ ಈಗ ಕಾಂಗ್ರೆಸ್ ಎಲ್ಲಾ ಕಡೆ ಬಂದ್ ಆಗುತ್ತಿದೆ. ಮೊದಲು ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಿ ಎಂದು ಟಾಂಗ್ ಕೊಟ್ಟರು.
ಕಾಂಗ್ರೆಸ್ ಗೆ ನನ್ನನ್ನ ಕಂಡರೆ ಭಯ. ಬಿಜೆಪಿ-ಜೆಡಿಎಸ್ ಮೈತ್ರಿ ಬಳಿಕ ಕಾಂಗ್ರೆಸ್ ಗೆ ನಿದ್ದೆ ಬರುತ್ತಿಲ್ಲ. ನನ್ನನ್ನ ಟಾರ್ಗೆಟ್ ಮಾಡಿದ್ದಾರೆ ಎಂದರು.
ಮಂಡಕ್ಕೆ ಹಣ ತಂದಿಲ್ಲ ಎಂಬ ಸಚಿವ ಚಲುವರಾಯಸ್ವಾಮಿ ಆರೋಪ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿಕೆ, ಬರೀ ಸಂಸದರ ಹಣ ತಂದಿಲ್ಲ ಸಿಎಸ್ ಆರ್ ಅನುದಾನ ಬಂದಿದೆ. ವಿಶೇಷ ಅನುದಾನವನ್ನೇ ತಂದಿದ್ದೇನೆ. ಇದು ಜನರಿಗೂ ಗೊತ್ತು. ಮಾಹಿತಿ ಇಲ್ಲದಿದ್ದರೆ ಮಾತನಾಡಬಾದು ಎಂದು ಹೆಚ್.ಡಿಕೆ ಕಿಡಿಕಾರಿದರು.
Key words: RSS, Congress, Union Minister, HDK