Tuesday, October 13, 2026

Dasara Wishes

Happy Dasara
Home Front Page ದೇವರ ಕೃಪೆ ಇದ್ದರೆ ಸಿಎಂ ಆಗುತ್ತೇನೆ- ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

ದೇವರ ಕೃಪೆ ಇದ್ದರೆ ಸಿಎಂ ಆಗುತ್ತೇನೆ- ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

ಮೈಸೂರು,ಏಪ್ರಿಲ್,10,2026 (www.justkannada.in): ನನಗೆ ಒಮ್ಮೆಯೂ ಬಹುಮತ ಬಂದಿಲ್ಲ. ದೇವರ ಕೃಪೆ ಇದ್ದರೆ ಸಿಎಂ ಆಗುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಗೆ ಒಮ್ಮೆಯೂ ಬಹುಮತ  ಸಿಕ್ಕಿಲ್ಲ.  ಆದರೂ ನಾನು ಸಿಎಂ ಆಗಿದ್ದೆ.  ದೇವರ ಕೃಪೆಯಿಂದ ಈ ಹಿಂದೆ ನಾನು ಸಿಎಂ ಆಗಿದ್ದು.  ಮುಂದೆಯೂ ದೇವರ ಕೃಪೆ ಇದ್ದರೆ ಸಿಎಂ ಆಗುತ್ತೇನೆ ಎಂದರು.

ಶಾಸಕರು, ಕಾರ್ಯಕರ್ತರು ಪ್ರೀತಿಯಿಂದ ಮುಂದಿನ ಸಿಎಂ ಅಂತಾರೆ.  ಸಿಎಂ ಆಗುವುದು ನನ್ನ ಕೈಯಲ್ಲಿಲ್ಲ ಭಗವಂತನ ಕೃಪೆ ಬೇಕು. ಹಿಂದೆ ಸಿಎಂ ಆದಾಗ ಯಾರೂ ಕೇಳಿರಲಿಲ್ಲ. ಮುಂದೆಯೂ ಅದೇ ರೀತಿ ಆಗುತ್ತದೆ ಎಂದರು.

Key words: God, blesses , I will, become CM, Union Minister, H.D. Kumaraswamy