ಆರ್ ಪಿಎಫ್ ಘಟಕ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾರಿಂದ ಶಿಲಾನ್ಯಾಸ…

ಶಿವಮೊಗ್ಗ,ಜನವರಿ,16,2021(www.justkannada.in): ಶಿವಮೊಗ್ಗ ಜಿಲ್ಲೆ ಭದ್ರಾವತಿ ಹೊರವಲಯದ ಬುಳ್ಳಾಪುರ ಬಳಿ ಆರ್ ಪಿಎಫ್ ಘಟಕ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೂಮಿಪೂಜೆ ನೆರವೇರಿಸಿದರು.jk-logo-justkannada-mysore

ರಾಜ್ಯಕ್ಕೆ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ನವದೆಹಲಿಯಿಂದ ಬೆಂಗಳೂರಿಗೆ  ಪ್ರಯಾಣಿಸಿ ಅಲ್ಲಿಂದ ಭದ್ರಾವತಿಗೆ ಆಗಮಿಸಿದರು. ಇಲ್ಲಿನ ಹೊರವಲಯದ ಬುಳ್ಳಾಪುರ ಬಳಿ ಆರ್ ಪಿಎಫ್ ಘಟಕಕ್ಕೆ ಅಮಿತ್ ಶಾ ಶಿಲನ್ಯಾಸ ನೆರವೇರಿಸಿದರು. 1500 ಕೋಟಿ ರೂ ವೆಚ್ಚದಲ್ಲಿ 50 ಎಕರೆ ಪ್ರದೇಶದಲ್ಲಿ ಇದನ್ನ ನಿರ್ಮಾಣ ಮಾಡಲಾಗುತ್ತಿದ್ದು, 500 ಆರ್ ಪಿಎಫ್ ಸಿಬ್ಬಂದಿಗೆ ತರಬೇತಿ ನೀಡಬಹುದಾಗಿದೆ.Union Home Minister- Amit Shah - RPF Unit-worship-Bhadravathi

ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವಥ್ ನಾರಾಯಣ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಕೆ.ಎಸ್ ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

Key words: Union Home Minister- Amit Shah – RPF Unit-worship-Bhadravathi